ಮರುವಾಯಿ ಸೇವಿಸಿ ತಲೆ ಸುತ್ತು ಬಂದು, ವಾಂತಿ ಮಾಡಿ ಆಸ್ಪತ್ರೆಗೆ ದಾಖಾಲಾದ ಜನರು

Tuesday, January 18th, 2022
Maruvayi

ಮಂಗಳೂರು :  ಮರುವಾಯಿ ಸೇವಿಸಿ ಹಲವರು ಅಸ್ವಸ್ಥಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ  ಕುಪ್ಪೆಪದವು ಪರಿಸರದಲ್ಲಿ  ನಡೆದಿದೆ. ಚಿಪ್ಪು ಮೀನು ಖರೀದಿಸಿ ಪದಾರ್ಥ ಮಾಡಿ ತಿಂದ ಮೇಲೆ ಕೆಲವರು ಅಸ್ವಸ್ಥಗೊಂಡಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡ ಒಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮರುವಾಯಿ ತಿಂದ ಜನರಲ್ಲಿ ತಲೆ ಸುತ್ತಲಾರಂಭಿಸಿದ್ದು, ಕಣ್ಣು ಮಂಜಾಗಿ, ವಾಂತಿಯೂ ಆಗಿದೆ ಎಂದು ತಳಿದು ಬಂದಿದೆ. ಮರುವಾಯಿ ಸಂರಕ್ಷಿಸಿಡಲು ರಾಸಾಯನಿಕ ಸಿಂಪಡಿಸಲಾಗುತ್ತಿದ್ದು, ಇದರಿಂದ […]

ಮತ್ಸ್ಯ ಬಳಕೆಗೆ ಗೊಂದಲ ಬೇಡ: ಹಸಿಮೀನು ಮದ್ಯವರ್ತಿ ಸಂಘಟನೆ

Tuesday, June 26th, 2018
Fish

ಮಂಗಳೂರು : ಇತ್ತೀಚೆಗೆ ವಿವಿಧ ಮಾಧ್ಯಮಗಳಲ್ಲಿ ಮತ್ಸ್ಯಗಳಿಗೆ ರಸಾಯನಿಕ ಬಳಸಿ ವಿತರಿಸಲಾಗುತ್ತಿದೆ ಎಂಬುದಾಗಿ ಅಪಪ್ರಚಾರ ನಡೆಸಲಾಗುತ್ತಿದ್ದು, ಈ ಬಗ್ಗೆ ಮತ್ಸ್ಯ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಹಸಿಮೀನು ಮಧ್ಯವರ್ತಿಗಳ ಸಂಘಟನೆ ಮಂಗಳೂರು ಗ್ರಾಹಕರಿಗೆ ಕರೆ ನೀಡಿದೆ. ಮಂಗಳೂರು ನಗರದ ಬಂದರಿನ ಧಕ್ಕೆಯು ಕರಾವಳಿಯಲ್ಲಿ ಪ್ರಮುಖ ಸಮುದ್ರೋತ್ಪನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಈ ಬಂದರಿನಿಂದ ವಿತರಿಸಲ್ಪಡುವ ಯಾವುದೇ ಮತ್ಸ್ಯೋತ್ಪನ್ನಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಮತ್ಸ್ಯ ಶೇಖರಣೆಗೆ ಸಾಂಪ್ರಾದಾಯಿಕ ಪದ್ದತಿಯಾದ ಶೀತಲೀಕರಣ ವ್ಯವಸ್ಥೆಯನ್ನೇ ಉಪಯೋಗಿಸಲಾಗುತ್ತದೆಯೇ ಹೊರತು, ಯಾವುದೇ ಕಾರಣಕ್ಕೂ ಆರೋಗ್ಯ […]