ಕಾಲೇಜು ವಿದ್ಯಾರ್ಥಿಯೋರ್ವ ಪ್ರೇಮ ವೈಫಲ್ಯದಿಂದ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ

Sunday, September 19th, 2021
Basayya Vastrada

ಹುಬ್ಬಳ್ಳಿ:  ಕಾಲೇಜು ವಿದ್ಯಾರ್ಥಿಯೋರ್ವ ಪ್ರೇಮ ವೈಫಲ್ಯದಿಂದ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಅಮರಗೋಳದ ಬಸಯ್ಯ ವಸ್ತ್ರದ ಎಂಬ ಯುವಕ ರೈಲು ಹಳಿಗೆ ತೆಲೆ ಕೊಟ್ಟ ಸಾವನಪ್ಪಿದ ಪ್ರೇಮಿಯಾಗಿದ್ದಾನೆ. ಪಿಯುಸಿ ವ್ಯಾಸಂಗ ಮಾಡಿರುವ ಬಸಯ್ಯ, ಅಮರಗೋಳ ಪ್ರದೇಶದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಬಸಯ್ಯನ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದಲೇ ರೈಲು ಹಳಿಗೆ ತೆಲೆ ಕೊಟ್ಟು ಸಾವನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಈತನ ತಂದೆ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಯವರನ್ನು ಅಂತ್ಯಕ್ರಿಯೆ ಮಾಡಿದ ಪುತ್ಥಳಿ ಕಾವಲು […]

ಸಂಚರಿಸುತ್ತಿದ್ದ ರೈಲಿಗೆ ಗುಡ್ಡ ಕುಸಿತ, ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲಿಗೆ ಹಾನಿ

Sunday, July 18th, 2021
Train

ಪುತ್ತೂರು : ಸಂಚರಿಸುತ್ತಿದ್ದ ರೈಲಿಗೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿ ರೈಲು ಸಂಚಾರ  ಸ್ಥಗಿತಗೊಂಡಿದೆ. ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ-ಏಕಿ ಧರೆ ಕುಸಿದಿದ್ದು, ಮಣ್ಣು ರೈಲಿನ ಮುಂಭಾಗಕ್ಕೆ ಕುಸಿದಿದ್ದು ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಹಳಿಯಲ್ಲಿ ಬಾಕಿಯಾಗಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮಾರ್ಗನ್ಸ್ ಗೇಟ್ : ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

Monday, March 9th, 2020
Ullal

ಉಳ್ಳಾಲ : ರೈಲ್ವೇ ಹಳಿಯಲ್ಲಿ ಯುವಕನ ಶವ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಮಾರ್ಗನ್ಸ್ ಗೇಟ್ ಎರಡನೇ ಬ್ರಿಡ್ಜ್ ನಡಿ ಭಾನುವಾರ ತಡರಾತ್ರಿ 1.30 ಸುಮಾರಿಗೆ ಬೆಳಕಿಗೆ ಬಂದಿದೆ. ಸುಮಾರು 30-35 ವರ್ಷ ಒಳಗಿನ ಯುವಕನ ಮೃತದೇಹ ಇದಾಗಿದೆ. ಸಮೀಪದಲ್ಲೇ ಬ್ಯಾಗ್ ಹಾಗೂ ಅದರೊಳಗೆ ಬಿಸ್ಲರಿ ಬಾಟಲ್ ನಲ್ಲಿ ಮದ್ಯ ಪತ್ತೆಯಾಗಿದೆ. ಧರಿಸಿದ್ದ ಪ್ಯಾಂಟಿನ ಕಿಸೆಯಲ್ಲಿ ತ್ರಿಶ್ಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಪತ್ತೆಯಾಗಿದೆ.ಪಸ್ 9 ನಲ್ಲಿ ಚಿಲ್ಲರೆ ಹಣ ಬಿಟ್ಟರೆ ಮೊಬೈಲ್ ಕೂಡಾ ಇರಲಿಲ್ಲ. ಕೇರಳದಿಂದ ಬರುವ […]