ಮಂಗಳವಾರ ಹಾಳಕೆರೆಯಲ್ಲಿ ಡಾ. ಸಂಗನಬಸವ ಮಹಾಸ್ವಾಮಿಗಳ ಸಮಾಧಿ

Monday, November 22nd, 2021
Sanganabasava

ಬೆಂಗಳೂರು  : ಕನ್ನಡ ನಾಡು ಕಂಡ ಅಪ್ರತಿಮ ಸಂತ-ಮಹಾಂತರಾಗಿ 8 ದಶಕಗಳ ಕಾಲ ನಾಡು -ನುಡಿಯ ಉದ್ದಾರಕ್ಕಾಗಿ ಶ್ರಮಿಸಿದ  ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ  ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಎಂಬತ್ತೈದು ವಯಸ್ಸಿನ ಡಾ. ಸಂಗನಬಸವ ಮಹಾಸ್ವಾಮಿಗಳು ಈ ದಿನ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬೆಳಗಿನ ಜಾವ 5 ಗಂಟೆಗೆ  ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಪರಮ ಪೂಜ್ಯ ಶ್ರೀಮದ ವೀರಶೈವ ಶಿವಯೋಗಿ ಮಂದಿರ ಅಧ್ಯಕ್ಷರು, ತಮ್ಮ ಜೀವನದದುದ್ದಕ್ಕೂ ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಆಹರ್ನಿಶಿ ಶ್ರಮಿಸಿದರು. […]

ಕರೊನಾ ಸೋಂಕಿಗೆ ಒಳಗಾಗಿದ್ದ ಭುವನಗಿರಿ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Tuesday, June 8th, 2021
siddalinga Shivacharya

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಕವಲೆದುರ್ಗದ ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ  ಲಿಂಗೈಕ್ಯರಾದರು. ಕರೊನಾ ಸೋಂಕಿತರಾಗಿದ್ದ ಸ್ವಾಮೀಜಿಯವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಹಿಂದೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಲಿಂಗೈಕ್ಯರಾದರು. ಕವಲೆದುರ್ಗ ಶ್ರೀಗಳು ಐದು ಪಿಎಚ್ಡಿ ಪದವಿ ಪಡೆದಿದ್ದರು. ಮಠದ ಎಲ್ಲ ಕೆಲಸವನ್ನು ತಾವೇ ಮಾಡುತ್ತಿದ್ದರು  ಮಠದಲ್ಲಿ ಯಾವುದೇ ಸೇವಕ ರಿರಲಿಲ್ಲ . ಅಲ್ಲದೆ ಮಠಕ್ಕೆ ಆಗಮಿಸುವ […]

ಅಪಘಾತ ಗೊಂಡಿದ್ದ ವಿರಕ್ತ ಮಠದ ಗುರುಲಿಂಗ ಸ್ವಾಮೀಜಿ ಲಿಂಗೈಕ್ಯ

Tuesday, July 14th, 2020
Gurulinga Swamiji

ಚಿತ್ರದುರ್ಗ:  ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಲೇಪೇಟದ ಪ್ರತಿಷ್ಠಿತ ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಸ್ವಾಮೀಜಿ (46) ಸೋಮವಾರ ರಾತ್ರಿ.8.30ಕ್ಕೆ ಚಿತ್ರದುರ್ಗದಲ್ಲಿ ಲಿಂಗೈಕ್ಯರಾದರು. ಗುರುಲಿಂಗ ಸ್ವಾಮೀಜಿ ಚಳ್ಳಕೇರಿಯ ಕಲ್ಲಯ್ಯ ಈರಮ್ಮಾ ದಂಪತಿಯ ನಾಲ್ಕನೇ ಪುತ್ರ.  ಚಿತ್ರದುರ್ಗ ಬೃಹನ್ಮಠದ ಶಾಖಾಮಠವಾಗಿರುವ ಖಟ್ವಾಂಗೇಶ್ವರ ಮಠಕ್ಕೆ 1991-92ರಲ್ಲಿ ನಿಯೋಜಿತರಾಗಿದ್ದರು. ಬಸವ ಪರಂಪರೆಯಂತೆ 1994ರಲ್ಲಿ ಪಟ್ಟಾಧಿಕಾರ ನಡೆಸಲಾಗಿತ್ತು. ಸ್ವಾಮೀಜಿ ಅಕ್ಟೋಬರ್ 27ರಂದು ಶ್ರೀಮಠದಿಂದ ಸ್ವಂತ ಕಾರಿನಲ್ಲಿ ತೆರಳುವಾಗ ಕಲಬುರ್ಗಿ ಬಳಿಯ ಕಪನೂರ ಹತ್ತಿರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಂದಿನಿಂದ ಕಲಬುರ್ಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ […]

ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

Friday, September 17th, 2010
ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

ಗದಗ : ಪದ್ಮ ಭೂಷಣ ಪುರಷ್ಕ್ರುತ ಡಾ| ಪಂಡಿತ್ ಪುಟ್ಟರಾಜ ಗವಾಯಿ (97) ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾಹ್ನ 12-30ಕ್ಕೆ ಲಿಂಗೈಕ್ಯರಾದರು. ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. 1914 ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನ ಗಲ್‌ನ ದೇವರ ಹೊಸಕೋಟೆ ಯಲ್ಲಿ ಜನಿಸಿದ ಪುಟ್ಟರಾಜ ಗವಾಯಿ  ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು.  ಬಾಲ್ಯ ದಲ್ಲಿಯೇ ಗವಾಯಿ ದೃಷ್ಟಿ ಕಳಕೊಂಡಿದ್ದರು. ಮಾವ ಚಂದ್ರಶೇಖರ್  ಪುಟ್ಟಯ್ಯಜ್ಜನಿಗೆ ಬೆಳಕಾಗಿ ಅವರ […]