ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

Friday, June 7th, 2024
shreyas-naika

ಉಡುಪಿ : ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕುಂದಾಪುರ ಮೂಲದ ಯುವಕನನ್ನು ಜೂ.7ರಂದು ಪೊಲೀಸರು ಬಂಧಿಸಲಾಗಿದೆ. ಕುಂದಾಪುರ ಮೂಲದ ಉದ್ಯಮಿ ಶ್ರೇಯಸ್ ನಾಯ್ಕ (25) ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ. ಆರೋಪಿಯು ತನ್ನ ಪ್ರಭಾವಿ ಅಧಿಕಾರವನ್ನು ಬಳಸಿಕೊಂಡು ಹಲವಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ಒಂದು ವರ್ಷದಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಮೇ 18ರಂದು […]

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರು ಅಲಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಕೇಸ್

Sunday, January 7th, 2024
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರು ಅಲಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಕೇಸ್

ಮಂಗಳೂರು : (ಮುಡಾ) ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರು ಅಲಿ ವಿರುದ್ಧ ಮಹಿಳಾ ಉದ್ಯೋಗಿ ಲೈಂಗಿಕ‌ ದೌರ್ಜನ್ಯ ಆರೋಪದ ದೂರು ದಾಖಲಿಸಿದ್ದಾರೆ. ಮುಡಾ ದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬೆರಳಚ್ಚುಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೂಡಾ ಆಯುಕ್ತ ಮನ್ಸೂರು ಅಲಿ ವಿರುದ್ಧ ಲೈಂಗಿಕ, ಮಾನಸಿಕ, ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ, ಜನವರಿ 6ರಂದು ಉರ್ವ ಪೊಲೀಸ್ ಠಾಣೆಯಲ್ಲಿ‌ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್‌ 354, 354Aರಡಿ ಕೇಸ್ ದಾಖಲಿಸಿ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ ಎಂದು […]

ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಸಂಬಂಧಿಕನ ಬಂಧನ

Thursday, November 11th, 2021
Ramesha

ಕಡಬ:  ಕೋಡಿಂಬಾಳ ಗ್ರಾಮದಲ್ಲಿ  ಅಪ್ರಾಪ್ತೆ  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಾಲಕಿಯ ಸಂಬಂಧಿಕನನ್ನು ಪೊಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಕೋಡಿಂಬಾಳ ಗ್ರಾಮದ ಪಾಜೋವು ಸಮೀಪದ ರಮೇಶ್ ಎಂಬಾತ ತನ್ನ ಸಂಬಂಧಿಕರಾಗಿರುವ ಅಪ್ರಾಪ್ತೆಯನ್ನು ಕಳೆದ ಒಂದೂವರೆ ವರ್ಷದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದೀಗ ಆಕೆ ಗರ್ಭವತಿಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ. 2020ರ ಏಪ್ರಿಲ್ ತಿಂಗಳಿನಿಂದ ರಮೇಶ್ ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಗರ್ಭವತಿಯಾದ ಬಗ್ಗೆ ಬಾಲಕಿ ಯಾರಿಗೂ ಮಾಹಿತಿ ನೀಡಿರಲಿಲ್ಲ. ಆಕೆ ಅಸ್ವಸ್ಥಗೊಂಡಿದ್ದು, ಈ ಸಂಬಂಧ […]

ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಆರೋಪಿ ಕೆ.ಎಸ್.ಎನ್. ರಾಜೇಶ್ ಭಟ್ ಗೆ ಲುಕ್ಔಟ್ ನೋಟಿಸ್ ಜಾರಿ

Tuesday, November 9th, 2021
Rajesh Bhat

ಮಂಗಳೂರು :  ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ  ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಅವರಿಗೆ   ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್ ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ಎಂದು ರಾಜೇಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು. ಈ ಪ್ರಕರಣ ಹೊರ ಬರುತ್ತಿದ್ದಂತೆ ರಾಜೇಶ್ ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಮತ್ತು […]

10ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಇಬ್ಬರಿಂದ ಅತ್ಯಾಚಾರ, ಪ್ರಕರಣ ದಾಖಲು

Friday, October 1st, 2021
Rapist

ಬೆಳ್ತಂಗಡಿ : ಇಬ್ಬರು ಆರೋಪಿಗಳು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆ ಗರ್ಭಧರಿಸಲು ಕಾರಣರಾದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೆಸಿಬಿ ಚಾಲಕ ರವೀಂದ್ರ ಹಾಗೂ ಕೊಕ್ರಾಡಿಯ ಯೋಗೀಶ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರ 10ನೇ ತರಗತಿ ವಿದ್ಯಾರ್ಥಿನಿಯನ್ನು ಇವರಿಬ್ಬರು ಬಲತ್ಕಾರವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಸಿದ್ದಾರೆ ಎಂದು ದೂರಲಾಗಿದೆ. […]

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಕುಕ್ಕೆ ಸುಬ್ರಹ್ಮಣ್ಯ ಶಿಕ್ಷಣ ಸಂಸ್ಥೆಯಾ ಶಿಕ್ಷಕ ಬಂಧನ

Sunday, August 8th, 2021
Gururaj

ಸುಬ್ರಹ್ಮಣ್ಯ :  ವಿದ್ಯಾರ್ಥಿನಿಯ ಮೇಲೆ  ಲೈಂಗಿಕ ದೌರ್ಜನ್ಯ ಆರೋಪದಡಿ ಶಿಕ್ಷಕನೊಬ್ಬ ಬಂಧನಕ್ಕೊಳಗಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ರಾಯಚೂರು ಮೂಲದ ಗುರುರಾಜ್ ಬಂಧಿತ ವ್ಯಕ್ತಿ. ಕುಕ್ಕೆ ಸುಬ್ರಹ್ಮಣ್ಯ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ವಿಭಾಗದ ಶಿಕ್ಷಕನಾಗಿರುವ ಈತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಶಾಲಾ ಶಿಕ್ಷಕನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದು, ಫೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಮೆಹೆಂದಿ ಕಾರ್ಯಕ್ರಮಕ್ಕೆ ಬಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

Monday, March 29th, 2021
child Abuse

ವಿಟ್ಲ : ಮೆಹೆಂದಿ ಕಾರ್ಯಕ್ರಮಕ್ಕೆ ವೊಂದಕ್ಕೆ ಬಂದ  ಬಾಲಕನ ಮೇಲೆ  ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲದ  ಮನೆಯೊಂದರಲ್ಲಿ ಮೆಹೆಂದಿ ಕಾರ್ಯಕ್ರಮವಿತ್ತು. ಇಲ್ಲಿಗೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ  ಆಗಮಿಸಿದ್ದ. ಇಲ್ಲಿಗೆ ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂಬಾತ ಕೂಡಾ ಬಂದಿದ್ದ. ಈ ಸಂದರ್ಭ ಆರೋಪಿಯು ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿಕ  ದೌರ್ಜನ್ಯ ನೀಡಿದ್ದಾರೆನ್ನಲಾಗಿದೆ. ಈ ಬಗ್ಗೆ ಬಾಲಕ ಮನೆಯವರಿಗೆ ವಿಚಾರ […]

ಪ್ಯಾಂಟ್‌ ಜಿಪ್ ಜಾರಿಸಿದರೆ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

Thursday, January 28th, 2021
posco act

ಮುಂಬೈ: ಐದು ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ತೀರ್ಪು ನೀಡಿದ್ದು,  ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೇ ಚರ್ಮಕ್ಕೆ ಚರ್ಮ ತಾಗದಿದ್ದರೆ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನಾಗ್ಪುರ್ ಪೀಠ, ಈಗ ಮತ್ತೊಂದು ವಿವಾದಾತ್ಮಕ […]

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್‌ಡಿಪಿಐ ಮುಖಂಡನ ಬಂಧನ

Sunday, January 24th, 2021
sdpi

ಉಳ್ಳಾಲ : ಅಪ್ರಾಪ್ತ ಬಾಲಕಿಯ ಮೇಲೆ  ಅತ್ಯಾಚಾರ ಯತ್ನ ನಡೆಸಿದ್ದಕ್ಕಾಗಿ ಉಳ್ಳಾಲ ವಲಯದ  ಎಸ್‌ಡಿಪಿಐ ಅಧ್ಯಕ್ಷ ನೊಬ್ಬನನ್ನು ಪೋಕ್ಸೊ ಕಾಯಿದೆಯಡಿ ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಎಸ್‌ಡಿಪಿಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಸಿದ್ದೀಖ್ ಉಳ್ಳಾಲ್ (43)  ಬಂಧಿತ ಆರೋಪಿ. ಸಹಾಯದ ನೆಪದಲ್ಲಿ ಮಹಿಳೆಯ  ಮನೆಗೆ ಭೇಟಿ ನೀಡುತ್ತಿದ್ದ ಸಿದ್ದೀಖ್ 15ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಮಹಿಳೆಯ ಪತಿ ತೊರೆದಿದ್ದು, ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಬಗ್ಗೆ ಮಹಿಳೆ ಜ.19 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ […]

ಪುತ್ರಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ, ತಂದೆಗೆ ಜೀವಾವಧಿ ಕಠಿಣ ಶಿಕ್ಷೆ

Monday, November 30th, 2020
father Rape daughter

ಉಡುಪಿ : ಪುತ್ರಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿ ತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಜೀವಮಾನ ಪರ್ಯಂತ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವರ್ಷಗಳ ಹಿಂದೆ ತನ್ನ 14 ವರ್ಷ ಪ್ರಾಯದ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಇದನ್ನು 16 ವರ್ಷ ಪ್ರಾಯದ ಹಿರಿಯ ಮಗಳು ವಿರೋಧಿಸಿದ್ದಳು. ಮುಂದೆ […]