ಮಗನಿಗೆ ಬಾಯಿಮುಚ್ಚಿ ಕುಳಿತು ಕೊಳ್ಳಲು ಆದೇಶ ನೀಡಿದ : ದೇವೇಗೌಡ
Friday, September 2nd, 2011ಬೆಂಗಳೂರು : ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರನ್ನು ಟೀಕಿಸುವ ಮೂಲಕ ಸಾರ್ವಜನಿಕವಾಗಿ ಮುಜುಗರಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಇನ್ನು ಮುಂದಾದರೂ ಬಾಯಿ ಬಿಡದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ನಾಯಕರು ತಾಕೀತು ಮಾಡಿದ್ದಾರೆ. ಲೋಕಾಯುಕ್ತ ವರದಿಯ ಕುರಿತು ನ್ಯಾಯಾಲಯದಲ್ಲಿಯೇ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಆ ವರದಿಯನ್ನೇ ಸಂಶಯ ಪಡುವ ರೀತಿಯಲ್ಲಿ ಹೆಗ್ಡೆ ಅವರ ಬಗ್ಗೆ ಹೇಳಿಕೆ ನೀಡಬಾರದಿತ್ತು. ಒಮ್ಮೆ ದೇವೇಗೌಡರು ಕ್ಷಮೆಯಾಚಿಸಿದ ನಂತರ ಮತ್ತೊಮ್ಮೆ ಟೀಕೆ ಮಾಡುವಂತಹ ಅಗತ್ಯವಿರಲಿಲ್ಲ ಎಂದು ಸ್ವತಃ ದೇವೇಗೌಡ, […]