ಪ್ರೀತಿ ನಿರಾಕರಿಸಿದ ಆರೋಪ: ಪ್ರಿಯತಮೆಯ ಕೊಂದು ಪ್ರೇಮಿ ಆತ್ಮಹತ್ಯೆ
Friday, September 28th, 2018ಮಂಗಳೂರು: ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದಳೆಂದು ಆರೋಪಿಸಿ ಯುವತಿಯ ಮನೆಗೆ ನುಗ್ಗಿದ್ದ ಪಾಗಲ್ ಪ್ರೇಮಿವೋರ್ವ ಆಕೆಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಮೂಡಬಿದಿರೆಯಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಚರಿಷ್ಮಾ ಎಂದು ಗುರುತಿಸಲಾಗಿದ್ದು, ಈಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ ಮಂಗಳೂರು ಮೂಲದ ಲೋಹಿತ್ ಎಂದು ತಿಳಿದು ಬಂದಿದೆ. ಮೂಡಬಿದಿರೆ ಪ್ರಾಂತ್ಯ ಶಾಲೆಯ ಬಳಿ ಇರುವ ಮನೆಯಲ್ಲಿ ಚರಿಷ್ಮಾ ವಾಸವಿದ್ದಳು. ಈಕೆಯನ್ನು ಮಂಗಳೂರಿನ ಬಜಾಲ್ ನಿವಾಸಿ ಲೋಹಿತ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗ್ತಿದೆ. ಲೋಹಿತ್ನ ಪ್ರೇಮ ಪ್ರಸ್ತಾಪವನ್ನು ಚರಿಷ್ಮಾ ನಿರಾಕರಿಸಿದ್ದಳು. […]