ಲಾಕ್ಡೌನ್ ಪರಿಣಾಮ ನೂರಾರು ಬ್ಯಾಕ್ಸ್ ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದ ರೈತರು
Sunday, May 16th, 2021ಕೋಲಾರ : ಸೂಕ್ತ ಬೆಲೆ ಸಿಗದೇ,ಬೆಳೆಗಾರರು ನೂರಾರು ಬ್ಯಾಕ್ಸ್ ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದು ಹೋಗಿರುವ ಘಟನೆ ತಾಲೂಕಿನ ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ನಡೆದಿದೆ. ನೀರಿನ ಸಮಸ್ಯೆ ಮಧ್ಯೆಯೂ ಲಕ್ಷಾಂತರ ರೂ. ಖರ್ಚು ಮಾಡಿ ತಾಲೂಕಿನ ಯಲುವಹಳ್ಳಿ ಗ್ರಾಮದ ಟಿ.ಆರ್.ವೇಣುಗೋಪಾಲ್ 5ಎಕರೆ, ಶಂಕರ್ 1 ಎಕರೆ ಮತ್ತು ರಾಮಚಂದ್ರಪ್ಪ3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು ಕೋವಿಡ್ ಲಾಕ್ಡೌನ್ ಪರಿಣಾಮ ಬೆಲೆ ಪಾಳಕ್ಕೆ ಕುಸಿದ ಪರಿಣಾಮ ಬೆಳೆಗೆ ಬೆಲೆ ಇಲ್ಲದಾಗಿದೆ. ಅವರು ಎರಡು ಮೂರು ದಿನಗಳಿಗೊಮ್ಮೆ750 ರಿಂದ 800 ಬಾಕ್ಸ್ ಟೊಮೆಟೋವನ್ನುಎನ್.ವಡ್ಡಹಳ್ಳಿ ಮಾರುಕಟ್ಟೆಗೆ ತರುತ್ತಿದ್ದರು. ಸರ್ಕಾರ […]