ಹೂವಿನ ವ್ಯಾಪಾರಿಯಿಂದ ಮಹಿಳೆಯ ಹತ್ಯೆ, ಬಳಿಕ ತಾನೂ ಆತ್ಮಹತ್ಯೆಗೆ ಶರಣು

Wednesday, November 18th, 2020
Surathkal Murder

ಸುರತ್ಕಲ್: ತನ್ನ ಪ್ರಿಯತಮೆಯನ್ನು ಹತ್ಯೆಗೈದ ಹೂವಿನ ವ್ಯಾಪಾರಿಯೊಬ್ಬ ತಾನೂ ಅತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಬುಧವಾರ ನಡೆದಿದೆ. ವಸಂತ್(44) ಕುಳಾಯಿ ನಿವಾಸಿಯಾಗಿದ್ದು ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದ.ಇವನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಆದರೆ ಬುಧವಾರ ಯಾವುದೋ ವೈಮನಸ್ಸಿನ ಕಾರಣದಿಂದ ಮಹಿಳೆಯನ್ನು ಕೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ , ಸುರತ್ಕಲ್ ಪೊಲೀಸರು ಭೇಟಿ […]