ವಾಕಿಂಗ್ ಮಾಡುತ್ತಿದ್ದ ಟ್ಯಾಕ್ಸಿ ಡ್ರೈವರ್ ಮೇಲೆ ತಲವಾರು ದಾಳಿ ನಡೆಸಿ ಕೊಲೆ

Monday, August 24th, 2020
Belthangady

ಬೆಳ್ತಂಗಡಿ : ಬೆಳಗ್ಗಿನ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಮೂವರು ದುಷ್ಕರ್ಮಿಗಳ  ತಂಡ ದಾಳಿ ನಡೆಸಿದಾಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಾಸು ಸಪಲ್ಯ(65) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಿಗ್ಗೆ ಬೆಳ್ತಂಗಡಿಯ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ವಾಸು ಸಪಲ್ಯ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು ಪರಿಣಾಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಾಸು ಸಪಲ್ಯ ವೃತ್ತಿಯಲ್ಲಿ ಬೆಳ್ತಂಗಡಿಯಲ್ಲಿ ಟ್ಯಾಕ್ಸಿ ವಾಹನದ ಚಾಲಕರಾಗಿ ಕೆಲಸ‌ ಮಾಡುತ್ತಿದ್ದರು. ಮಗ ಕೂಡ ಚಾಲಕ […]