ಕಲ್ಲಡ್ಕ ಪ್ರಭಾಕರ್ ಭಟ್ ಮಂಗಳೂರು ವಿಶ್ವ ವಿದ್ಯಾಲಯ ಪ್ರವೇಶ ವಿರೋಧಿಸಿ, ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Wednesday, March 30th, 2022
Campus-front

ಮಂಗಳೂರು: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್  ಅವರನ್ನು ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮಕ್ಕೆ  ಅಥಿತಿಯಾಗಿ ಆಹ್ವಾನಿಸಿರುವುದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಪೋಲೀಸ್ ಭದ್ರತೆ ಹಾಕಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಿವಿ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿದ್ದಾರೆ. ಕೋಮು ದ್ವೇಷದ ಭಾಷಣ ಮಾಡುವ ಆರ್ ಎಸ್‍ ಎಸ್ ಮುಖಂಡ ಪ್ರಭಾಕರ್ ಭಟ್ ಅವರನ್ನು ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ […]

ಮಂಗಳೂರು ವಿವಿ ಹಗರಣಗಳ ಬಗ್ಗೆ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಶ್ನೆ

Thursday, December 20th, 2018
vedvyas-kamth

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಗರಣಗಳ ಕುರಿತು ರಾಜ್ಯ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು ಮಂಗಳೂರು ವಿವಿಯಲ್ಲಿ ಮೂರು ವರ್ಷಗಳಿಂದ ನಡೆದ ಹಗರಣಗಳು ಸರಕಾರದ ಗಮನಕ್ಕೆ ಬಂದಿದೆಯಾ ಎಂದು ಪ್ರಶ್ನೆ ಕೇಳಿದಾಗ ಗಮನಕ್ಕೆ ಬಂದಿಲ್ಲ ಎಂದು ಸರಕಾರ ಕಡೆಯಿಂದ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ. ಮಂಗಳೂರು ವಿವಿಯಲ್ಲಿ ನಡೆದ ಹಗರಣಗಳ ಬಗ್ಗೆ ಪತ್ರಿಕೆ, […]

ದುಷ್ಕರ್ಮಿಗಳು ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ಘಟನೆಗೆ ಕ್ರಮ ಜರಿಗಿಸಿ

Thursday, September 6th, 2018
Abvp

ಮಂಗಳೂರು :  ವಿಶ್ವವಿದ್ಯಾಲಯದಲ್ಲಿ ದಿನಾಂಕ 29.08.2018 ರಂದು ವಿದ್ಯಾರ್ಥಿನಿಯೊಂದಿಗೆ ಕೆಲವು ದುಷ್ಕಮರ್ಿಗಳು ಅಶ್ಲೀಲವಾಗಿ ವರ್ತಿಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಈ ಘಟನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿರುವ ಈ ಘಟನೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿರುವ ವಿದ್ಯಾರ್ಥಿನಿಯರ ಭದ್ರತೆ ಮತ್ತು ರಕ್ಷಣೆಯ ಬಗ್ಗೆ ಪ್ರಶ್ನೆಯನ್ನು ಮಾಡುವಂತಿದೆ. ಕ್ಯಾಂಪಸ್ನಲ್ಲಿ ಈ ಘಟನೆಗಳು ನಡೆಯುತ್ತಿದ್ದರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೇ ಮೊನ್ನೆ ನಡೆದ ಘಟನೆಗೆ ಸಂಬಂದಿಸಿದಂತೆ […]

ವಿದ್ಯಾರ್ಥಿಗಳಿಂದ ಸೆಲ್ಫಿ ವಿತ್ ಡ್ರಗ್ಸ್ ಫ್ರೀ ಕ್ಯಾಂಪಸ್

Wednesday, August 1st, 2018
selfie

ಮಂಗಳೂರು  : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಳೆದ 69 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲಿ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂದಿನ ವಿದ್ಯಾರ್ಥಿ- ಇಂದಿನ ಪ್ರಜೆಯೆಂಬ ಕಲ್ಪನೆಯೊಂದಿಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ನಾಯಕತ್ವವನ್ನು ನೀಡುತ್ತಿದೆ.ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳ ವಿರುದ್ಧ ನಿರಂತರವಾದ ಯಶಸ್ವಿ ಹೋರಾಟಗಳನ ಕಟ್ಟಿ ವಿದ್ಯಾರ್ಥಿಗಳ ನಡುವೇಜಾಗೃತಿ ಮೂಡಿಸುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜುಲೈ 30 […]

ಮಂಗಳೂರು ವಿ.ವಿ.ಯಲ್ಲಿ ಹಗರಣಗಳ ಸರಮಾಲೆ: ಎಬಿವಿಪಿ ಆರೋಪ

Wednesday, July 25th, 2018
mangaluru

ಮಂಗಳೂರು: ಮಂಗಳೂರು ವಿ.ವಿ ಇಂದು ಕರಾವಳಿಗರ ಹೆಮ್ಮೆಯಾಗಿ ಉಳಿದಿಲ್ಲ-ಅಧಿಕಾರದ ದುರ್ಬಳಕೆ, ಸ್ವಜಾತಿ ಹಾಗೂ ಸ್ವಜನಪಕ್ಷಪಾತ, ಸರ್ಕಾರಿ ಹಣದ ಅಪವ್ಯಯ, ಸಂಪನ್ಮೂಲಗಳ ಲೂಟಿ, ಪರೀಕ್ಷಾ ನಿರ್ವಹಣೆಯ ಹೊರಗುತ್ತಿಗೆ, ಅಂಕಪಟ್ಟಿಯ ಹಗರಣ, ದೂರ ಶಿಕ್ಷಣದ ದಂಧೆ, ವಿದೇಶೀ ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣದ ಹೆಸರಿನಲ್ಲಿ ನಡೆಸಿದ ದುರ್ವ್ಯವಹಾರ, ವಿವಿ ಹಣದ ಲೂಟಿಗೆಂದೇ ನಡೆಸುತ್ತಿರುವ ನಿರುಪಯುಕ್ತ ಓಪನ್ ಹೌಸ್ ನಾಟಕ, ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ ಬೇಕಾಬಿಟ್ಟಿ ನೇಮಕಾತಿಗಳು. ಇತ್ತೀಚಿನ 2-3 ವರ್ಷಗಳಲ್ಲಿ ನಡೆದ ಈ ಎಲ್ಲಾ ಕುಖ್ಯಾತ ಘಟನೆಗಳ ಬಗ್ಗೆ ಪ್ರತಿಕೆ […]

ಮಂಗಳೂರು ವಿವಿ ಸಮಸ್ಯೆ ಬಗೆಹರಿಸಲು ಎಬಿವಿಪಿ ಪ್ರತಿಭಟನೆ

Sunday, February 12th, 2017
abvp protest

ಮಂಗಳೂರು: ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳೂರು ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಮತ್ತು ಸಮಸ್ಯೆಗೆ ಸಂಬಂಧಪಟ್ಟವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ನಗರದ ಪಿವಿಎಸ್‌ ವೃತ್ತದ ಬಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರನ್ನು ಉದ್ದೇಶಿಸಿ ಶೀತಲ್‌ ಕುಮಾರ್‌ ಮಾತನಾಡಿ, ವಿವಿಯ ಪ್ರಾಥಮಿಕ ಕಾರ್ಯಗಳಾದ ಶಿಕ್ಷಣ, ಪರೀಕ್ಷೆ ಮತ್ತು ಫಲಿತಾಂಶ, ಅಂಕಪಟ್ಟಿ ನೀಡುವುದು ಪ್ರಮುಖವಾಗಿದೆ. ಆದರೆ ವಿಶ್ವವಿದ್ಯಾಲಯ ಪ್ರಮುಖವಾದ ಕೆಲಸಗಳನ್ನೇ ಮರೆತು ಅವ್ಯವಹಾರದ ಹಾದಿಗೆ ಸಾಗಿದೆ ಎಂದು ಆರೋಪಿಸಿದರು. ಕಾರ್ಯಕರ್ತರಾದ ಕೀರ್ತನ ಮಾತನಾಡಿ, ವಿಶ್ವವಿದ್ಯಾಲಯವು ಸಮಾಜದಲ್ಲಿ ಸಮಸ್ಯೆಗಳು […]

ಪಿ.ಯು. ವಿದ್ಯಾರ್ಥಿಗಳಿಗೆ ತಕ್ಷಣವೇ ಪಠ್ಯ-ಪುಸ್ತಕ ವಿತರಿಸಲು ಎಬಿವಿಪಿ ಆಗ್ರಹ.

Tuesday, June 24th, 2014
ABVP

ಮಂಗಳೂರು : ಶೈಕ್ಷಣಿಕ ವರ್ಷ ಈಗಾಗಲೇ ಪ್ರಥಮ ಹಾಗೂ ದ್ವೀತಿಯ ವರ್ಷದ ತರಗತಿಗಳು ಆರಂಭವಾಗಿದೆ. ಆದರೂ ಇದುವರೆಗೂ ಪಠ್ಯ ಪುಸ್ತಕಗಳು ದೊರಕದೆ ವಿದ್ಯಾರ್ಥಿಗಳು, ಅಧ್ಯಾಪಕರು ಗೊಂದಲಿದಾರೆ ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಪಠ್ಯಪುಸ್ತಕ ವಿತರಿಸುವಲ್ಲಿ ಗಮನ ಹರಿಸಿ, ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ಜೂನ್ 24 ರಂದು ಪಿವಿಎಸ್ ವೃತ್ತದ ಬಳಿ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿತು. ಕರ್ನಾಟಕ ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಪದವಿ ಪೂರ್ವದಲ್ಲಿ ವ್ಯಾಸಾಂಗ […]