ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ 10 ವರ್ಷಗಳ ಡೇಟಾ ಸೋರಿಕೆ, 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್

Saturday, May 22nd, 2021
AirIndia

ನವದೆಹಲಿ : ಏರ್ ಇಂಡಿಯಾದ ಡೇಟಾ ಸೋರಿಕೆಯಾಗಿದ್ದು, ಕಳೆದ 10 ವರ್ಷಗಳ ಸುಮಾರು 45 ಲಕ್ಷ ಏರ್ ಇಂಡಿಯಾ ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು  ಸಂಸ್ಥೆ ಹೇಳಿಕೊಂಡಿದೆ. ಡೇಟಾ  ಸರ್ವರ್ ಅನ್ನು ತಂತ್ರಜ್ಞಾನ ಪೂರೈಕೆ ಸಂಸ್ಥೆ ಎಸ್‌ಐಟಿಎ(ಸಿಟಾ) ನಿರ್ವಹಣೆ ಮಾಡುತ್ತಿದ್ದು, ಏರ್ ಇಂಡಿಯಾದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಸೈಬರ್ ದಾಳಿಯಾಗಿ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ. ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 […]

ಇಂದಿನಿಂದ ಹುಬ್ಬಳ್ಳಿಯಿಂದ ಬೆಂಗಳೂರು, ಹೊಸದಿಲ್ಲಿಗೆ ವಿಮಾನಯಾನ ಆರಂಭ

Monday, May 25th, 2020
Hubballi Airport

ಹುಬ್ಬಳ್ಳಿ : ಕೊರೋನಾ ಸೋಂಕು ಪ್ರಸರಣ ತಡೆಗೆ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ಮಾರ್ಚ್‌ 25 ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸ್ಥಗಿತಗೊಂಡಿತ್ತು. ಹಂತ ಹಂತವಾಗಿ ಲಾಕ್‌ ಡೌನ್‌ ನಿರ್ಭಂದ ಸಡಿಲಿಸುತ್ತಿರುವ ಕೇಂದ್ರ ಸರಕಾರ ಮೇ.25 ಸೋಮವಾರದಿಂದ ದೇಶದಲ್ಲಿ ಆಂತರಿಕ ವಿಮಾನಯಾನ ಆರಂಭಿಸಲು ಅನುಮತಿ ನೀಡಿದೆ. ಹೀಗಾಗಿ ಸ್ಟಾರ್‌ ಏರಲೈನ್ಸ್‌ ವಿಮಾನಯಾನ ಸಂಸ್ಥೆಯು ಮೇ.25 ಸೋಮವಾರದಿಂದ ಹುಬ್ಬಳ್ಳಿಯಿಂದ ಹೊಸದಿಲ್ಲಿ (ಹಿಂಡಾನ್)‌ ಹಾಗೂ ಬೆಂಗಳೂರಿಗೆ ವಿಮಾನಯಾನ ಆರಂಭಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ […]

ಮಂಗಳೂರಿನಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ

Monday, December 12th, 2016
Flight

ಮಂಗಳೂರು: ನಗರದಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಪ್ರತಿ ದಿನ ಮಧ್ಯಾಹ್ನ ಹೈದರಾಬಾದ್‌‌‌‌ನಿಂದ 1 ಗಂಟೆಗೆ ಹೊರಡುವ ವಿಮಾನ 2.30ಕ್ಕೆ ಮಂಗಳೂರಿಗೆ ತಲುಪಲಿದೆ. ಅಲ್ಲದೆ ಮಂಗಳೂರಿನಿಂದ 2.50ಕ್ಕೆ ಹೊರಡುವ ವಿಮಾನ ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.

ಮಂಗಳೂರು-ಶಾರ್ಜಾ ನಡುವಣ ಜೆಟ್‌ ಜೆಟ್‌ ಏರ್‌ವೇಸ್‌ನ ನೇರ ವಿಮಾನಯಾನ ಆರಂಭ

Monday, August 8th, 2016
Mangalore-Sharja

ಮಂಗಳೂರು: ಮಂಗಳೂರು-ಶಾರ್ಜಾ ನಡುವಣ ಜೆಟ್‌ ಜೆಟ್‌ ಏರ್‌ವೇಸ್‌ನ ನೇರ ವಿಮಾನಯಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರವಿವಾರ ಆರಂಭವಾಯಿತು. ಮುಖ್ಯ ಅತಿಥಿಯಾಗಿದ್ದ ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಅವರು ಮಂಗಳೂರು-ಶಾರ್ಜಾ ನೇರವಿಮಾನ ಯಾನದ ದೀರ್ಘ‌ಕಾಲದ ಕನಸು ನನಸಾಗಿದೆ ಎಂದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸುವ ಮೂಲಕ ಜೆಟ್‌ ಏರ್‌ವೇಸ್‌ ಯಶಸ್ಸು ಸಾಧಿಸಿದೆ ಎಂದು ಶ್ಲಾಘಿಸಿದರು. ಮಂಗಳೂರು ಅಂ.ವಿ. ನಿಲ್ದಾಣದ ಸಮಗ್ರ ಬೆಳವಣಿಗೆ […]