ಮಾರಕಾಸ್ತ್ರಗಳಿಂದ ಕಡಿದು ಎಲ್ಐಸಿ ಏಜೆಂಟ್ ಕೊಲೆ

Thursday, January 13th, 2022
Shantappa-Gowda

ಬೆಳ್ತಂಗಡಿ : ವ್ಯಕ್ತಿಯೋರ್ವನನ್ನು  ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ಯಿ ಕೃಷಿಕ ಮತ್ತು ಎಲ್ಐಸಿ ಏಜೆಂಟ್ ಪ್ರತಿನಿಧಿಯಾಗಿರುವ ಶಾಂತಪ್ಪ ಗೌಡ ದೇವಸ್ಯ(40) ಎಂದು ಗುರುತಿಸಲಾಗಿದೆ. ಜಾಗದ ವಿಚಾರವಾಗಿ ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಆರೋಪಿ ಜಯಚಂದ್ರ ಎಂಬಾತ ಪರಾರಿಯಾಗಿದ್ದಾನೆ.