ದೇವಾಲಯಗಳ ಇತಿಹಾಸ, ಶಾಸನಗಳ ಪ್ರಾಚೀನತೆ ಬಿಂಬಿಸಿದ ಗೋಷ್ಠಿ

Monday, March 2nd, 2020
ujire

ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿ ಆಯೋಜಿತವಾದ ಶಾಸನ ಶಾಸ್ತ್ರ ಸಂಘದ 45ನೇ ಮತ್ತು ಸ್ಥಳ ನಾಮ ಸಂಘದ 39ನೇ ಜಂಟಿ ಅಧಿವೇಶನದಲ್ಲಿ ದೇವಾಲಯಗಳ ಇತಿಹಾಸ ಮತ್ತು ಶಾಸನಗಳ ಪ್ರಾಚೀನ ವೈಶಿಷ್ಟ್ಯತೆ ಕುರಿತ ವಿಸ್ತೃತ ವಿಚಾರಗಳು ಪ್ರಸ್ತುತಪಡಿಸಲ್ಪಟ್ಟವು. ನಾಗರಿಕ ಸಂಹಿತೆ ಮತ್ತು ಪೋರ್ಚುಗಿಸ್ ಶಾಸನಗಳು, ನಾಗಾವ್‌ ಶಾಸನದ ಸಾಮಾಜಿಕ ಸಂಕೇತ, ಆಂಧ್ರದ ಇತ್ತೀಚಿನ ಬ್ರಾಹ್ಮೀ ಶಾಸನಗಳು, ಎರಡನೇ ಹೊಯ್ಸಳ ವೀರಬಲ್ಲಾಳ, ಸೂರ್ಯದೇವ ಮತ್ತು ಅವನ ದೇವಾಲಯದ […]

ಶಿವಮೊಗ್ಗ : ಬಾದಾಮಿ ಚಾಲುಕ್ಯರ ಕಾಲದ ಸ್ಮಾರಕ ಶಾಸನ ಪತ್ತೆ

Tuesday, February 11th, 2020
shasana

ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಹೋಬಳಿ ತಾಳಗುಪ್ಪ ಗ್ರಾಮದಲ್ಲಿ ಬಾದಾಮಿ ಚಾಲುಕ್ಯರ ಕಾಲದ ಸ್ಮಾರಕ ಶಾಸನ ಪತ್ತೆಯಾಗಿದೆ. ಗ್ರಾಮದಲ್ಲಿರುವ ಈಶ್ವರ-ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ದೇವಾಲಯದ ಬಾಗಿಲನ್ನು ಬಿಚ್ಚಿದಾಗ ತೋರಣದ ಕಲ್ಲಿನಲ್ಲಿ ಸ್ಮಾರಕ ಶಾಸನ ಪತ್ತೆಯಾಗಿದೆ. 12ನೇ ಶತಮಾನದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಾಗ ಈ ಶಾಸನ ನಡುವೆ ಗಂಧ (ರಂಧ್ರ) ಮಾಡಿ ತೋರಣ ಕಲ್ಲಾಗಿ ಬಳಸಲಾಗಿದೆ. ಇದರಲ್ಲಿ ಐದು ಸಾಲಿನ ಪೂರ್ವ ಹಳೆಗನ್ನಡ ಶಾಸನವಿದ್ದು, ನಾಲ್ಕು ಅಕ್ಷರಗಳು ರಂಧ್ರ ಮಾಡಿರುವುದರಿಂದ ಹೋಗಿವೆ. […]

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ವಿಜಯನಗರ ಕಾಲದ ಶಾಸನ ಬೆಳಕಿಗೆ

Tuesday, May 14th, 2019
Shasana

ಮಂಗಳೂರು  : ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದ ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ. ಮಧ್ಯದಲ್ಲಿ ತುಂಡರಿಸಲ್ಪಟ್ಟ ಈ ಜೀರ್ಣಗೊಂಡ ಶಾಸನವನ್ನು ಈಗ ಕಬ್ಬಿಣದ ಪಂಜರ ಒಂದರಲ್ಲಿಟ್ಟು ಸಂರಕ್ಷಿಸಿಡಲಾಗಿದೆ. ಆಳೆತ್ತರದ ಶಿಲಾ ಫಲಕದ ಮೇಲೆ ಸುಮಾರು ನಲ್ವತ್ತಏಳು ದೀರ್ಘಪಂಕ್ತಿಗಳಲ್ಲಿ ಇದನ್ನು ಬರೆಯಲಾಗಿದೆ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲೇ ಇದ್ದರೂ ಇದನ್ನು ಯಾರೂ ಅಧ್ಯಯನ ಮಾಡಲು ಪ್ರಯತ್ನಸಿರಲಿಲ್ಲ. ನಿವೃತ್ತ ಇತಿಹಾಸ ಪ್ರಾಧ್ಯಾಪಕರೂ, ಶಾಸನ ತಜ್ಞರೂ ಆದ ಡಾ| […]