ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಕೊರೊನಾ ಸೋಂಕು ಇಳಿಮುಖವಾಗಲು ಪ್ರಾರ್ಥನೆ ಮಾಡಿದ ಸಚಿವ ಈಶ್ವರಪ್ಪ

Tuesday, May 18th, 2021
Eswarappa

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ  ಕೊರೊನಾ ಸೋಂಕಿತ ರು ಬೇಗ ಗುಣಮುಖರಾಗಲೆಂದು ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗಲಿ ಎಂದು ಸಚಿವ ಈಶ್ವರಪ್ಪ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದ್ದಾರೆ ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ದೇವಾಲಯದಲ್ಲಿ,  ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ, ಸಚಿವ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿ, ಪೂಜೆ ನೆರವೇರಿಸಿದ್ದಾರೆ. ಈಶ್ವರಪ್ಪ ದಂಪತಿ ಸಮೇತ ಪೂರ್ಣಾಹುತಿ ನೆರವೇರಿಸಿ,  ಕೊರೊನಾ ಇಳಿಕೆಗೆ ಭಗವಂತನಿಗೆ ನಮಿಸಿದ್ದಾರೆ.

ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಮಹಿಮೆ ಅಪಾರ

Tuesday, March 31st, 2020
Sigandooru

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದುಷ್ಟರಿಂದ ರಕ್ಷಣೆ ಪಡೆಯುವ ಹೆಸರೆಂದರೆ ಅದುವೇ ಸಿಗಂಧೂರು ಚೌಡೇಶ್ವರಿ ಅಮ್ಮನವರು. ಹಣ ಆಸ್ತಿ ಚಿನ್ನಾಭರಣ ಕಳೆದುಕೊಂಡಾಗ ದೇವಿಯ ಮೊರೆ ಹೋದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ವಾಡಿಕೆ. ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಸಿಗಂದೂರಿನಲ್ಲಿ ಈ ಪುಣ್ಯ ಕ್ಷೇತ್ರವಿದೆ ಹಾಗಾಗಿ ಈ ಕ್ಷೇತ್ರಕ್ಕೆ ಸಿಗಂದೂರು ಚೌಡೇಶ್ವರಿ ಎಂದು ಕರೆಯುವುದುಂಟು. ಶೇಷಪ್ಪ ಎಂಬವರ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ಗುಡಿ ಕಟ್ಟಲು ಆಜ್ಞೆ ಮಾಡುವರು ಇದರಂತೆ ಶ್ರೀಕ್ಷೇತ್ರ ನಿರ್ಮಾಣವಾಯಿತು ಎಂಬುದು […]