ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

Saturday, February 8th, 2020
naagamandala

ಸುರತ್ಕಲ್ ‌: ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ‘ಇಡ್ಯಾ ಶ್ರೀ ಮಹಾಲಿಂಗೇಶ್ವರ’ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪೂರ್ವಾಹ್ನ ಘಂಟೆ 9.30 ರಿಂದ 9.45 ರವರೆ ಮೀನ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ನಡೆದಿದೆ. ರಾತ್ರಿ 10 ಗಂಟೆಗೆ ನಾಗವನದಲ್ಲಿ ಹಾಲಿಟ್ಟು ಸೇವೆಯಾದ ನಂತರ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರು ಮುದ್ದುರು ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವವು ನಡೆದಿದೆ. ನಾಗಮಂಡಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ದೇವರ ನಾಗದರ್ಶನ ಪಡೆದು ಕೃತಾರ್ಥರಾದರು.  

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿಗೆ ಹೃದಯಾಘಾತ

Friday, May 31st, 2019
puttur-Nandi

ಪುತ್ತೂರು : ತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಹೆಸರಿನ ಬಸವ ಹೃದಯಾಘಾತಕ್ಕೆ ಒಳಗಾಗಿ ಮೇ.30ರ ರಾತ್ರಿ ಮೃತಪಟ್ಟಿದೆ . ನಂದಿ ದಿನ ನಿತ್ಯದಂತೆ ಮೇ30ರ ಮಧ್ಯಾಹ್ನ ಪೂಜೆ ವೇಳೆ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿತ್ತು. ಆದರೆ ರಾತ್ರಿ 7.45 ರ ವೇಳೆಗೆ ನಂದಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಸವನ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ

Monday, March 26th, 2018
PutturuGopura1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರ ಸಮರ್ಪಣೆ ಕಾರ್ಯಕ್ರಮ ಮಾ.25ರಂದು ಜರಗಿತು. ಬೆಳಿಗ್ಗೆ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಂತರ ರಾಜಗೋಪುರ ಸಮರ್ಪಣೆ, ಉದ್ಘಾಟನೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. […]

ದಶಕಗಳಿಂದ ಪಾಳುಬಿದ್ದಿದ್ದ ಕಾವೂರು ಕೆರೆ ಪುನಃಶ್ಚೇತನ

Thursday, March 22nd, 2018
kavoor

ಮಂಗಳೂರು: ಪಾಳು ಬಿದ್ದಿರುವ ಕೆರೆಗಳ ಪುನಃಶ್ಚೇತನಕ್ಕೆ ಮುಂದಾಗುವುದು ಬಹಳ ಅಪರೂಪ. ಈ ಕಾರಣದಿಂದಲೇ ಪಾಳು ಬಿದ್ದಿದ್ದ ಎಷ್ಟೋ ಕೆರೆಗಳು ಈಗ ಕಣ್ಮರೆಯಾಗಿವೆ. ಹೀಗಿರುವಾಗ, ಹಲವು ದಶಕಗಳಿಂದ ಪಾಳು ಬಿದ್ದಿರುವ ಕಾವೂರಿನಲ್ಲಿರುವ ಬೃಹತ್‌ ಕರೆಯೊಂದನ್ನು ಪುನಃಶ್ಚೇತನಗೊಳಿಸಿ ಅಂತರ್ಜಲ ಮಟ್ಟ ವೃದ್ಧಿಸಲು ಸ್ಥಳೀಯರೇ ಮುಂದಾಗಿದ್ದಾರೆ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಬೃಹದಾಕಾರದ ಕೆರೆಯ ಪುನಃ ಶ್ಚೇತನದ ದೃಷ್ಟಿಯಿಂದ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು, ಮೊದಲ ಹಂತವಾಗಿ ಮಾ. 25ರಂದು ಬೆಳಗ್ಗೆ 6.30ರಿಂದ ಸುಮಾರು 100 ಮಂದಿ ಸ್ವಯಂ ಸೇವಕರು ಶ್ರಮದಾನ […]