ಭಟ್ಕಳ : ಯಾಂತ್ರಿಕ ದೋಣಿ ಮುಳುಗಡೆ : ಐದು ಮಂದಿ ಮೀನುಗಾರರ ರಕ್ಷಣೆ
Monday, September 16th, 2019ಭಟ್ಕಳ : ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳಗಡೆಗೊಂಡಿದ್ದು ಐದು ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಭಾನುವಾರ ಸಂಭವಿಸಿದೆ. ಶ್ರೀ ಲಕ್ಷ್ಮೀವೆಂಕಟೇಶ ಹೆಸರಿನ ಈ ದೋಣಿ ರಾಘವೇಂದ್ರ ಖಾರ್ವಿ ಎಂಬುವವರಿಗೆ ಸೇರಿದ್ದು. ರಾಘವೇಂದ್ರ, ಚೇತನ, ಉದಯಕುಮಾರ, ಶನಿಯಾರ, ಸುಬ್ರಹ್ಮಣ್ಯ ಎಂಬವರನ್ನು ಅಪಾಯದಿಂದ ರಕ್ಷಿಸಲಾಗಿದೆ. ಭಾನುವಾರ ಬೆಳಿಗ್ಗೆ ತಾಲೂಕಿನ ಕರಿಕಾಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ, ಬುಡದಿಂದ ನೀರು ತುಂಬಿಕೊಂಡ ಪರಿಣಾಮ ಈ ದುರ್ಘಟನೆ […]