ಜೈಲಿಗೆ ಹೊರಗಿನಿಂದ ಬೇಯಿಸಿದ ಆಹಾರ ಎಗ್ಗಿಲ್ಲದೆ ಪೂರೈಕೆ, ಜಿಲ್ಲಾ ಕಾರಾಗೃಹಕ್ಕೆ ಅಪವಾದ
Tuesday, October 17th, 2017ಮಂಗಳೂರು: ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಊಟ, ತಿಂಡಿ ಪೂರೈಕೆ ಮಾಡುವುದನ್ನು ನಿಷೇಧಿಸಿದ್ದರೂ ಮಂಗಳೂರಿನ ಜಿಲ್ಲಾ ಕಾರಾಗೃಹ ಇದಕ್ಕೆ ಅಪವಾದವಾಗಿದೆ. ಏಕೆಂದರೆ ಈ ಜೈಲಿಗೆ ಹೊರಗಿನಿಂದ ಬೇಯಿಸಿದ ಆಹಾರ ಎಗ್ಗಿಲ್ಲದೆ ಪೂರೈಕೆಯಾಗುತ್ತಿದೆ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ಹಣ್ಣು ಹಂಪಲುಗಳ ಸರಬರಾಜಿಗೆ ಮಾತ್ರ ಅವಕಾಶ ಇದೆ. ಆದರೆ ಸೋಮವಾರ ದಿನ ಮಂಗಳೂರು ಜೈಲಿನ ವಿಚಾರಣಾಧೀನ ಕೈದಿಗಳಿಗೆ ಅವರ ಸಂಬಂಧಿಕರಿಂದ ಅಥವಾ ಸಂದರ್ಶಕರಿಂದ ಅನ್ನ, ಸಾಂಬಾರು, ಪುಂಡಿ (ಕಡುಬು), ಮೀನಿನ ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳು ಪೂರೈಕೆಯಾಗಿವೆ ಶನಿವಾರ ಮತ್ತು ರವಿವಾರ […]