ಒಂದೇ ತಿಂಗಳಲ್ಲಿ ಮೂರು ಹಿಂದೂ ಯುವಕರ ಕೊಲೆ ನಡೆದಿದೆ, ಪೊಲೀಸರು ಎಚ್ಚೆತ್ತು ಕೊಳ್ಳಬೇಕು

Wednesday, October 28th, 2020
vhp

ಮಂಗಳೂರು: ಕರಾವಳಿಯಲ್ಲಿ ಒಂದೇ ತಿಂಗಳಲ್ಲಿ ಮೂರು ಹಿಂದೂ ಯುವಕರ ಕೊಲೆ ನಡೆದಿದೆ. ಕಿಶನ್ ಹೆಗ್ಡೆ, ಸಂಪತ್ ಕುಮಾರ್, ಹಾಗೂ ಸುರೇಂದ್ರ ಬಂಟ್ವಾಳ್ ಎಂಬ ಯುವಕ ರು ಪರಸ್ಪರ ವೈಯಕ್ತಿಕ ದ್ವೇಷ ಗಂಗ್ವಾರ್ ಗಳಿಗೆ ಬಲಿಯಾಗಿದ್ದರೆ, ಇಂತಹ ಕೃತ್ಯಗಳು ಮುಂದೆ ನಡೆಯಬಾರದು ಎಂದು ಪೊಲೀಸರಿಗೆ ಮನವಿ ಸಲ್ಲಿಸಿರುವುದಾಗಿ ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್ ವೆಲ್ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಇಂತಹ ಕೃತ್ಯಗಳು ನಡೆದ ಕೂಡಲೇ ಆ ಪ್ರದೇಶದ ಯುವಕರನ್ನು ಕರೆಸಿ […]

ಮುಂಗ್ಲಿಪಾದೆ ಮರ್ಡರ್ – ಪೊಲೀಸರಿಂದ ಸ್ಥಳ ಮಹಜರು

Tuesday, October 13th, 2020
Manglipade

ಸುಳ್ಯ: ಮುಂಗ್ಲಿಪಾದೆ ಎಂಬಲ್ಲಿ ಸಂಪತ್‌ ಕುಮಾರ್‌ನನ್ನು ಅ. 8 ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಪೊಲೀಸ್ ಕಸ್ಟಡಿ ಹಾಗೂ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂಪತ್ ‌ಕುಮಾರ್ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸರ ತಂಡವು ಕೊಲೆಯ ಆರೋಪಿಗಳಾದ ಮನಮೋಹನ್ ಯಾನೆ ಮನು ಕಲ್ಲುಗುಂಡಿ, ಮನೋಜ್ ಯಾನೆ ಮಧು ದಂಡಕಜೆ, ಬಿಪಿನ್ ಕೂಲಿಶೆಡ್ಡ್, ಕಾರ್ತಿಕ್ ದಂಡಕಜೆ ಹಾಗೂ ಶಿಶಿರ್ ಅಡ್ಕಾರ್ ಎಂಬುವರನ್ನು ಬಂಧಿಸಿದ್ದರು. ಮಂಗಳವಾರ ಇವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರು […]

ಸುಳ್ಯ : ಜಾಮೀನು ಪಡೆದು ಹೊರಗೆ ಬಂದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಗುಂಡಿಟ್ಟು ಕೊಲೆ ಮಾಡಿದ ಅಪರಿಚಿತರು

Thursday, October 8th, 2020
sampath

ಮಂಗಳೂರು: ಜಾಮೀನು ಪಡೆದು ಹೊರಗೆ ಬಂದಿದ್ದ ಕೊಲೆ ಪ್ರಕರಣದ ಆರೋಪಿಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸಂಪತ್‌ ಕುಮಾರ್‌ (35) ಎಂದು ಗುರುತಿಸಲಾಗಿದೆ. ಬೆಳಗ್ಗೆ 6  ಗಂಟೆ ಸುಮಾರಿಗೆ ಸಂಪತ್‌ ಅವರು ಮನೆಯಿಂದ ಹೊರಡುವ ವೇಳೆ ಅಪರಿಚಿತರು ಕಾರಿನ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಕಾರು ನಿಯಂತ್ರಣ ತಪ್ಪಿ  ರಸ್ತೆ ಬದಿಗೆ ಸರಿದಿದೆ. ನಂತರವೂ ಗುಂಡಿನ ಸದ್ದು ಕೇಳಿದೆ ಎಂದು ಸ್ಥಳೀಯರು  ತಿಳಿಸಿದ್ದಾರೆ.  ಸುಳ್ಯ ತಾಲೂಕಿನ ಶಾಂತಿನಗರದಲ್ಲಿ […]

ಚಟ್ಟಂಚಾಲ್‌ನಲ್ಲಿ ಅಗ್ನಿ ಅನಾಹುತ: ಪೊಲೀಸ್ ವಶದಲ್ಲಿದ್ದ ವಾಹನಗಳಿಗೆ ಕಿಚ್ಚು

Sunday, January 17th, 2016
fire mishap

ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಡಂಬಿಂಗ್ ಮೈದಾನದಲ್ಲಿ ಶುಕ್ರವಾರ ಉಂಟಾದ ಅಗ್ನಿಅನಾಹುತದಲ್ಲಿ ವಿವಿಧ ಪ್ರಕರಣಗಳಲ್ಲೊಳಗೊಂಡ ಮೂವತ್ತರಷ್ಟು ವಾಹನಗಳು ಅಗ್ನಿಗಾಹುತಿಯಾಗಿವೆ. ವಿದ್ಯಾನಗರ ಪೊಲೀರು ಸ್ವಯಂ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ1.30 ಕ್ಕೆ ಗ್ರೌಂಡ್‌ನ ಒಂದು ಭಾಗದಲ್ಲಿ ಅಗ್ನಿನಾಹುತ ಉಂಟಾಗಿರುವುದು ನಾಗರಿಕರ ಗಮನಕ್ಕೆ ಬಂದಿತ್ತು. ನಂದಿಸಲು ಪ್ರಯತ್ನವೂ ನಡೆದಿತ್ತು. ಆದರೆ ಗಾಳಿಗೆ ಬೆಂಕಿ ಹರಡಿರುವುದರಿಂದ ಕಾಸರಗೋಡಿನ ಲೀಡಿಂಗ್ ಫಯರ್‌ಮ್ಯಾನ್ ಕೆ. ಸತೀಶನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಎರಡು ಯೂನಿಟ್ ಹಾಗೂ ಕಾಞಂಗಾಡ್‌ನಿಂದ ಒಂದು ಯೂನಿಟ್ […]