10ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ಧೂರಿ ತೆರೆ
Friday, March 2nd, 2018ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ ಬಿದ್ದಿದೆ. ಕಳೆದ 7 ದಿನಗಳಿಂದ 11 ವಿವಿಧ ಚಿತ್ರಮಂದಿರಗಳಲ್ಲಿ 50 ದೇಶದ 200ಕ್ಕೂ ಹೆಚ್ಚುಗಳು ಪ್ರದರ್ಶನಗೊಂಡ ಸಿನಿಮಾ ಹಬ್ಬಕ್ಕೆ ಗುರುವಾರ ತೆರೆ ಎಳೆಯಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿನಿಮೋತ್ಸವದ ಸಮಾರಂಭ ನಡೆಸಲಾಯಿತು. ರಾಜ್ಯಪಾಲ ವಜೂಭಾಯ್ ವಾಲಾ, ಸಿಎಂ ಸಿದ್ದರಾಮಯ್ಯ, ನಿರ್ದೇಶಕ ಮಣಿರತ್ನಂ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಚ್, ಮೇಯರ್ ಸಂಪತ್ ರಾಜ್ ನಾಗಾಭರಣ, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ಹಿರಿಯ ನಿರ್ದೇಶಕ ದೊರೆ-ಭಗವಾನ್, […]