60ಕ್ಕೂ ಹೆಚ್ಚು ಮಂಗಗಳಿಗೆ ವಿಷಾಹಾರ ಹಾಕಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ರಸ್ತೆ ಬದಿ ಎಸೆದ ದುಷ್ಕರ್ಮಿಗಳು

Thursday, July 29th, 2021
monkeys

ಹಾಸನ: ವಿಷಾಹಾರ ಸೇವಿಸಿದ ಸುಮಾರು 60ಕ್ಕೂ ಹೆಚ್ಚು ಮಂಗಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ರಸ್ತೆ ಬದಿ ಎಸೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಸಕಲೇಶಪುರದ ಬೇಗೂರು ಕ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 60ಕ್ಕೂ ಹೆಚ್ಚು ಚೀಲಗಳಲ್ಲಿ ಮಂಗಗಳನ್ನು ಹಾಕಿ ರಸ್ತೆ ಬದಿಗೆ ಎಸೆಯಲಾಗಿದೆ. ದಾರಿಹೋಕರು ಇದನ್ನು ನೋಡಿ ಚೀಲಗಳನ್ನು ಬಿಚ್ಚಿದ್ದು ಈ ವೇಳೆ ಮಂಗಗಳಿಗೆ ವಿಷಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮಂಗಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ 60 […]

ಕೊಡಗು ಜಿಲ್ಲೆ ಮತ್ತು ಸಕಲೇಶಪುರ ಅತೀವೃಷ್ಠಿ ಪೀಡಿತರಿಗೆ ಕ್ಷೇತ್ರ ಧರ್ಮಸ್ಥಳದಿಂದ ರೂ. 10 ಕೋಟಿ ಬಿಡುಗಡೆ

Friday, September 7th, 2018
Veerendra-Hegde

ಧರ್ಮಸ್ಥಳ : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಉಂಟಾಗಿರುವ ವ್ಯಾಪಕ ಹಾನಿಯ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಇಂದು ಧರ್ಮಸ್ಥಳದಲ್ಲಿ ವಿಶ್ಲೇಷಣೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಕುಟುಂಬಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ನಡೆಸಿದ ಸರ್ವೇಕ್ಷಣೆ ವರದಿಯನ್ನು ಕೊಡಗು ಜಿಲ್ಲೆಯ ನಿರ್ದೇಶಕ ಶ್ರೀ ಯೋಗೀಶ್‌ರವರು ನೀಡಿದರು. ಜಿಲ್ಲೆಯಲ್ಲಿ ಸುಮಾರು 1,715 ಯೋಜನೆಯ ಕುಟುಂಬಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಈ ಪೈಕಿ 1,000 ಕುಟುಂಬಗಳ ಮನೆಗಳು ಸಂಪೂರ್ಣವಾಗಿ ನಾಶವಾಗಿದೆ ಇಲ್ಲವೇ ಹಾನಿಯುಂಟಾಗಿದೆ. ಸುಮಾರು ರೂ. 2.50 ಕೋಟಿಯ ಉಪಕರಣಗಳು, ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಿದೆ. […]