ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಕೊರೊನಾ ಸೋಂಕು ಇಳಿಮುಖವಾಗಲು ಪ್ರಾರ್ಥನೆ ಮಾಡಿದ ಸಚಿವ ಈಶ್ವರಪ್ಪ

Tuesday, May 18th, 2021
Eswarappa

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ  ಕೊರೊನಾ ಸೋಂಕಿತ ರು ಬೇಗ ಗುಣಮುಖರಾಗಲೆಂದು ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗಲಿ ಎಂದು ಸಚಿವ ಈಶ್ವರಪ್ಪ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದ್ದಾರೆ ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ದೇವಾಲಯದಲ್ಲಿ,  ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ, ಸಚಿವ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿ, ಪೂಜೆ ನೆರವೇರಿಸಿದ್ದಾರೆ. ಈಶ್ವರಪ್ಪ ದಂಪತಿ ಸಮೇತ ಪೂರ್ಣಾಹುತಿ ನೆರವೇರಿಸಿ,  ಕೊರೊನಾ ಇಳಿಕೆಗೆ ಭಗವಂತನಿಗೆ ನಮಿಸಿದ್ದಾರೆ.

ಸಚಿವ ಈಶ್ವರಪ್ಪನವರಿಗೆ ಬೆದರಿಕೆ ಕರೆ, ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ : ಬಸವರಾಜ ಬೊಮ್ಮಾಯಿ

Saturday, January 4th, 2020
Basavaraj-Bommai

ಹಾವೇರಿ : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ್ದ. ಇನ್ನು 48 ತಾಸುಗಳಲ್ಲಿ ಹತ್ಯೆ ಮಾಡುವುದಾಗಿ ಹೇಳಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅಪರಿಚಿತ ನಂಬರ್ನಿಂದ ಕರೆ ಬಂದಿದ್ದು ತಮಿಳುನಾಡಿನಿಂದ ಎಂಬುದು ಗೊತ್ತಾಗಿದೆ. ಆ ನಂಬರ್ನ್ನು ಪರಿಶೀಲನೆ ಮಾಡಲಾಗಿದೆ ಎಂದಿದ್ದಾರೆ. ಬೆದರಿಕೆ ಕರೆ ಬಗ್ಗೆ ಎಲ್ಲ ರೀತಿಯ ತನಿಖೆ, ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅವರಿಗೆ […]

ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಕೆ : ಮಡಿಕೇರಿಯಲ್ಲಿ ಸಚಿವ ಈಶ್ವರಪ್ಪ ಟೀಕೆ

Friday, October 25th, 2019
eswarappa

ಮಡಿಕೇರಿ  : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರುಗಳು ಖುರ್ಚಿ ಕಳೆದುಕೊಂಡು ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರದ ಆಡಳಿತದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತು ಅವರು ಸ್ಪಷ್ಟಪಡಿಸಿದರು. ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಬಿಜೆಪಿಯ ಎಲ್ಲಾ ಸಚಿವರು ತಮ್ಮ ಹುದ್ದೆಯನ್ನು ಸ್ವತಂತ್ರವಾಗಿ […]