ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನೂತನ ಮೇಳ 27ರಿಂದ ಆರಂಭ

Saturday, October 17th, 2020
Patla Mela

ಮಂಗಳೂರು: ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನೂತನ ಮೇಳ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ. ನವೆಂಬರ್‌ 27ರಿಂದ ಮೇಳ ತಿರುಗಾಟ ಆರಂಭಿಸಲಿದೆ. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಮಾತನಾಡಿ, ನಮ್ಮ ಕ್ಷೇತ್ರದ ವತಿಯಿಂದ ಈ ಬಾರಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ನೂತನ ಯಕ್ಷಗಾನ ಮೇಳ ತಿರುಗಾಟ ನಡೆಸಲಿದೆ. ಅಕ್ಟೋಬರ್ 26 ವಿಜಯದಶಮಿ‌ಯಂದು […]

ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗೋಣ : ಭಾಗವತ ಪಟ್ಲ ಸತೀಶ್ ಶೆಟ್ಟಿ

Friday, November 15th, 2019
Patla

ಮಂಗಳೂರು : ಅನೇಕ ಯಕ್ಷಗಾನ ಕಲಾವಿದರ ಬದುಕು ಇಂದು ಕರುಣಾಜನಕ ಸ್ಥಿತಿಯಲ್ಲಿದ್ದು, ಅಂತಹವರ ಕುಟುಂಬಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದಯುವ ಮದ್ದಳೆಗಾರ ಕಡಬ ವಿನಯ ಆಚಾರ್ಯರ ಸಂಸ್ಮರಣಾಕಾರ್ಯಕ್ರಮದಲ್ಲಿಅವರುನುಡಿನಮನ ಸಲ್ಲಿಸಿದರು. ತನ್ನತಂದೆ ದಿವಂಗತ ಕಡಬ ನಾರಾಯಣ ಆಚಾರ್ಯರಿಂದ ಬಳುವಳಿಯಾಗಿ ಬಂದಿರುವ ಚೆಂಡೆ-ಮದ್ದಳೆ ವಾದನದಲ್ಲಿ ವಿನಯನೂಕೂಡಾ ಸಾಧನೆ ಗೈದು ಉತ್ತಮ ಕಲಾವಿದನಾಗಿ ರೂಪುಗೊಂಡಿದ್ದ. ದಿನೇಶ ಅಮ್ಮಣ್ಣಾಯರಂತಹ ಹಿರಿಯ ಭಾಗವತರ ಸಹಿತ […]

ಕಂದಾವರ ಸತೀಶ್ ಶೆಟ್ಟಿಗೆ ‘ಕೊಳ್ಕೆರೆ ರತ್ನಾಕರ ಶೆಟ್ಟಿ ಸ್ಮಾರಕ ಸಾಧಕ ಪ್ರಶಸ್ತಿ’

Thursday, December 20th, 2018
kundapura

ಕುಂದಾಪುರ: ಕೊಳ್ಕೆರೆ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಹಾಗು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಬಸ್ರೂರು ಇವರು ಕೊಡಮಾಡುವ ‘ಕೊಳ್ಕೆರೆ ರತ್ನಾಕರ ಶೆಟ್ಟಿ ಸ್ಮಾರಕ ಸಾಧಕ ಪ್ರಶಸ್ತಿ 2018-19’ ಗೆ ಕಂದಾವರ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕುಂದಾಪುರ ತಾಲೂಕಿನ ಬಲ್ಕೂರು ಗ್ರಾಮದ ಪ್ರತಿಷ್ಠಿತ ಬಂಟ ನಾಡ ಕುಟುಂಬವಾಗಿರುವ ಕಂದಾವರದವರಾಗಿದ್ದು, ತಂದೆ ಮೊಳಹಳ್ಳಿ ಗೋಪಾಲ ಕೃಷ್ಣ ಶೆಟ್ಟಿ ಹಾಗು ತಾಯಿ ಕಂದಾವರ ದೇವಕಿ ಶೆಟ್ಟಿ ಅವರ ಮಗನಾಗಿರುವ ಕಂದಾವರ ಸತೀಶ್ ಶೆಟ್ಟಿ ಅವರು ‘ಕೊಳ್ಕೆರೆ […]

ಸಾಯಿಬಾಬಾ ಪಾದುಕೆ ದರ್ಶನ ಪಡೆದ ಭಕ್ತರು

Thursday, May 24th, 2018
sai-baba

ಮಂಗಳೂರು: ಶಿರಡಿಯಿಂದ ಮಂಗಳೂರಿನ ಉರ್ವ ಚಿಲಿಂಬಿಯ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಆಗಮಿಸಿದ ಸಾಯಿ ಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮದಲ್ಲಿ ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಾಯಿ ಬಾಬಾರವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ದರ್ಶನಾರ್ಥವಾಗಿ ಶಿರಿಡಿಯಿಂದ ಚಿಲಿಂಬಿಯ ಸಾಯಿ ಬಾಬಾ ಮಂದಿರಕ್ಕೆ ತರಲಾಗಿತ್ತು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಪಾದುಕೆಯ ದರ್ಶನ ಪಡೆದರು. ಸಂಜೆ ಪಟ್ಲಸತೀಶ್ ಶೆಟ್ಟಿ ಮತ್ತು ಬಳಗದವರಿಂದ ಶ್ರೀ ಸಾಯಿ ಯಕ್ಷಾರಾಧನೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು.

ಯಕ್ಷಧ್ರುವ ಪಟ್ಲ ಸಂಭ್ರಮ 2018 ಕಾರ್ಯಕ್ರಮದ ತೃತೀಯ ವರ್ಷದ ವಾರ್ಷಿಕೋತ್ಸವ

Friday, March 16th, 2018
sathish-patla

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 3ನೇ ವರ್ಷದ ವಾರ್ಷಿಕೋತ್ಸವ ’ಯಕ್ಷಧ್ರುವ ಪಟ್ಲ ಸಂಭ್ರಮ’ 2018 ಕಾರ್ಯಕ್ರಮ ಮೇ 27ರಂದು ಭಾನುವಾರ ಅಡ್ಯಾರ್‌ಗಾರ್ಡ್‌ನಲ್ಲಿ ಜರಗಲಿದ್ದು ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಡ್ಯಾರ್‌ಗಾರ್ಡ್‌ನಲ್ಲಿ ಜರಗಿತು. ಸಭೆಯಲ್ಲಿ ‘ಪಟ್ಲ ಸಂಭ್ರಮ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಮಾಹಿತಿಯನ್ನು ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸಭೆಗೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ […]

ಶ್ರೇಯಾ ಸೇನ್‌ ಗುಪ್ತಾಗೆ ಡೈರಿಡೇ ಗೋಲ್ಡನ್‌ ಸ್ಪೂನ್‌

Friday, March 9th, 2018
sathish-patla

ಮಂಗಳೂರು : ಡೈರಿ ಡೇ ಐಸ್‌ಕ್ರೀಂ ತಯಾರಕರಾದ ಡೈರಿ ಕ್ಲಾಸಿಕ್‌ ಐಸ್‌ಕ್ರೀಮ್ಸ್‌ ಪ್ರೈ. ಲಿ. ಸಂಸ್ಥೆಯವರು ಏರ್ಪಡಿಸಿದ್ದ ಡೈರಿಡೇ ಸಿಲ್ವರ್‌ ಸ್ಪೂನ್‌ ಸ್ಪರ್ಧೆ 400 ವಿಜೇತರ ಪೈಕಿ ಬೆಂಗಳೂರಿನ ಶ್ರೇಯಾ ಸೇನ್‌ ಗುಪ್ತ ಅವರು 35,000 ರೂ. ಮೌಲ್ಯದ ಗೋಲ್ಡನ್‌ ಸ್ಪೂನ್‌ ಬಂಪರ್‌ ಬಹುಮಾನ ವಿಜೇತರಾಗಿದ್ದಾರೆ. ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಟ್ರಸ್ಟ್‌ನ ಮಂಗಳೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಅವರು ಮಾ. 7ರಂದು ಲಕ್ಕಿ ಡ್ರಾ ನೆರವೇರಿಸಿದರು. ಡೈರಿಡೇಯ ನೂತನ ಪಾನ್‌ […]