ಕೋವಿಡ್-19 ರೋಗದಿಂದ ಮೃತಪಟ್ಟ ಮುಸ್ಲಿಂ ಸಮಾಜದವರನ್ನು ಗೌರವದಿಂದ ಅಂತ್ಯ ಸಂಸ್ಕಾರ ಮಾಡಿ

Sunday, July 19th, 2020
coronadeath

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ನಗರ ಉತ್ತರ ಜಿಲ್ಲೆ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಸದರಿ ಕಾರ್ಯಕ್ಕಾಗಿ […]

ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ : ಅರವಿಂದ ಚೊಕ್ಕಾಡಿ

Friday, February 7th, 2020
aravind

ವಿದ್ಯಾಗಿರಿ : ಶಿಕ್ಷಣದ ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಉನ್ನತಿಯನ್ನ ಹೊಂದಲು ಸಾಧ್ಯ. ಜತೆಯಲ್ಲಿ ಹೆಣ್ಣಿನ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವ ಸಮಾಜ ನಿರ್ಮಾಣವಾಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ”ಗುರುವಿನ ಅರಿವು- ವಿಶೇಷ ಉಪನ್ಯಾಸ ಮಾಲಿಕೆ 2019-20”ರಲ್ಲಿ ’ನಾರಾಯಣಗುರು- ಸಮಗ್ರತೆಯ ಅನ್ವೇಷಣೆ’ಯ ಕುರಿತು ಮಾತನಾಡಿದರು. ಶಿಕ್ಷಣ ಕುಸಿತದಿಂದ ಸಮಾಜವು ಹತಾಶ […]