ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Sunday, July 11th, 2021
Davanagere Hospital

ದಾವಣಗೆರೆ :  ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದ್ದು, ಇದಕ್ಕಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. 9 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಉದ್ದೇಶವಿದೆ. ರಾಜ್ಯದಲ್ಲಿ 18 […]

ಐತಿಹಾಸಿಕವಾಗಿ ನಾಲ್ಕು ಸಾವಿರದಷ್ಟು ವೈದ್ಯರ ನೇಮಕ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Monday, June 28th, 2021
Dr Sudhakar

ಬೆಂಗಳೂರು :  ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಕೆ ಕ್ರಮ ಅನುಷ್ಠಾನಗೊಂಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿವಿಧ ಹುದ್ದೆಗಳಿಗೆ 2,053 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಇತ್ತೀಚೆಗೆ ಪೂರ್ಣಗೊಂಡ 1,750 ವೈದ್ಯರ ಐತಿಹಾಸಿಕ ನೇರ ನೇಮಕಾತಿ ಸೇರಿದಂತೆ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಟ್ಟು 4,000 ವೈದ್ಯರನ್ನ ನೇಮಿಸಿಕೊಂಡಿದೆ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಂಬಿಬಿಎಸ್ ಪದವೀಧರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ […]

‘ಹೊಸ ವರ್ಷದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ’

Thursday, November 12th, 2020
sudhakar

ಮೈಸೂರು: ಹೊಸ ವರ್ಷದ ಮೊದಲ ದಿನದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಹಾಗೂ ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಮಾತನಾಡಿದ ಸಚಿವರು, ‘ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ಎಲ್ಲ ಕಡೆ ಪರೀಕ್ಷೆಗಳನ್ನು ಒಂದು ರೂ. ಶುಲ್ಕ ಪಡೆಯದೇ ಉಚಿತವಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಜನವರಿ 1ರಂದು ಘೋಷಿಸಲಾಗುವುದು’ ಎಂದು ಮಹತ್ವದ ವಿಚಾರವನ್ನು […]

ಶಾಸಕ ಎಸ್. ಅಂಗಾರ ಅವರಿಗೆ ಕೊರೋನ ಪಾಸಿಟಿವ್ ದೃಢ

Friday, August 28th, 2020
S Angara

ಸುಳ್ಯ : ಬೆಂಗಳೂರಿನಿಂದ ಆಗಮಿಸಿದ  ಶಾಸಕ ಎಸ್. ಅಂಗಾರ ಅವರಿಗೆ ಕೊರೋನ ಪಾಸಿಟಿವ್ ದೃಢವಾಗಿದ್ದು, ಹೊಮ್ ಕ್ವಾರಂಟೈನ್ ಗೆ ಒಳಗಾಗಿರುವುದಾಗಿ ಅವರು ತಿಳಿಸಿದ್ದಾರೆ. ಶಾಸಕರಿಗೆ ತಲೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷೆ ಮಾಡಿಕೊಂಡಿದ್ದು, ರಿಪೋರ್ಟ್ ನಲ್ಲಿ ಕೊರೋನ ಪಾಸಿಟಿವ್ ದೃಢವಾಗಿದ್ದು, ಕ್ವಾರಂಟೈನ್ ನಲ್ಲಿ ಇರುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 5 ಜನರನ್ನು ಬಲಿ ಪಡೆದ ಕೋವಿಡ್ ಮಹಾಮಾರಿ

Sunday, July 12th, 2020
corona virus

ಮಂಗಳೂರು : ಕೋವಿಡ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಭಾನುವಾರ ಒಂದೇ ದಿನ 5 ಜನರನ್ನು ಬಲಿ ಪಡೆದುಕೊಂಡಿರುವ ವರದಿ ಬಂದಿದೆ. ಮೃತರಲ್ಲಿ ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ಧ, ಪುತ್ತೂರಿನ‌ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿ , ಮಂಗಳೂರಿನ ಉರ್ವಾಸ್ಟೋರ್ ನಿವಾಸಿ 72 ವರ್ಷದ ವೃದ್ಧ, ಮಂಗಳೂರಿನ ಬಳ್ಳಾಲ್ ಭಾಗ್ ನಿವಾಸಿ 60 ವರ್ಷದ ವೃದ್ಧೆ, ಹಾಗೂ ಮಂಗಳೂರಿನ‌ ಬಂದರು ನಿವಾಸಿ 68 ವರ್ಷದ ವೃದ್ಧೆ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸಾವನ್ನಪ್ಪಿದ ಐದು ಮಂದಿಯಲ್ಲಿ […]

ಮಂಗಳೂರಿನಲ್ಲಿ ರಾಜ್ಯದ ಮೊದಲ ಕಿಯೋಸ್ಕ್‌ ಆರೋಗ್ಯ ಸೇವೆ ಆರಂಭ

Monday, March 12th, 2018
mangaluru

ಮಂಗಳೂರು: ಸರ್ಕಾರಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ತೆರಳಲು ಸಮಯವಿಲ್ಲವೆಂದು ಗೊಣಗುವ ಪ್ರಮೇಯ ಇನ್ನಿಲ್ಲ. ಕಾರಣ ನಗರದ ಜನನಿಬಿಡ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಂತಾಗಲು ರಾಜ್ಯ ಸರ್ಕಾರ ಉಚಿತ ಹೆಲ್ತ್ ಕಿಯೋಸ್ಕ್ ಸೇವೆನ್ನು ಆರಂಭಿಸುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಆರಂಭಗೊಳ್ಳುತ್ತಿರುವ ಹೆಲ್ತ್ ಕಿಯೋಸ್ಕ್ ರಾಜ್ಯದಲ್ಲೇ ಮೊದಲು. ಈಗಾಗಲೇ ಬೆಂಗಳೂರು ಮತ್ತು ಮೈಸೂರು ಸ್ಲಂ ಪ್ರದೇಶಗಳಲ್ಲಿ ಕಿಯೋಸ್ಕ್ ಸೇವೆ ಇದೆಯಾದರೂ ಅಲ್ಲಿ ನಿರ್ದಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಿಯೋಸ್ಕ್, ಇಲ್ಲಿ ಪ್ರತ್ಯೇಕವಾಗಿ ಸ್ಥಾಪನೆಯಾಗುತ್ತಿದೆ. ಬೆಳಗ್ಗೆ 7ರಿಂದ […]

ಯುವಕನಿಂದ ಆದಿವಾಸಿ ಯುವತಿಯೋರ್ವಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

Monday, October 3rd, 2016
lokesh-bangera

ಮಂಗಳೂರು: ಆದಿವಾಸಿ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಗೇರುಕಟ್ಟೆ ನಿವಾಸಿ ಲೋಕೇಶ್ ಬಂಗೇರ (23) ಎಂಬಾತ ಬಂಧಿತ ಆರೋಪಿ. ಆರು ತಿಂಗಳ ಹಿಂದೆ ಇಲ್ಲಿನ ರೆಂಕೆದಗುತ್ತು ಸಮೀಪದ ಮನೆಯಿಂದ ಪೇಟೆ ಕಡೆ ಹೋಗುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ತಡೆದ ಈತ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಹೆದರಿದ ಯುವತಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ. ಇದೀಗ ಯುವತಿ ಗರ್ಭಿಣಿಯಾಗಿದ್ದು ದೂರು ನೀಡಿದ್ದಾಳೆ. ಯುವತಿಗೆ ಬೆಳ್ತಂಗಡಿ ಸರ್ಕಾರಿ […]