ಲೋಕಾಯುಕ್ತದಿಂದ ಸಾರ್ವಜನಿಕ ಸಭೆ: ನ್ಯಾ. ವಿಶ್ವನಾಥ ಶೆಟ್ಟಿ
Monday, February 6th, 2017ಮ0ಗಳೂರು : ಸರಕಾರದ ಸೇವೆಗಳಲ್ಲಿ ವಿಳಂಭ ಸೇರಿದಂತೆ ನಾಗರೀಕರಿಗೆ ಪಾರದರ್ಶಕವಾಗಿ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಮತ್ತು ದೂರುಗಳನ್ನು ಆಲಿಸಲು ಲೋಕಾಯುಕ್ತ ಸಂಸ್ಥೆಯಿಂದ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಡಳಿತದಲ್ಲಿ ಪಾರದರ್ಶಕತೆ ಅತಿ ಪ್ರಾಮುಖ್ಯವಾಗಿದೆ. ಸರಕಾರಿ ಯೋಜನೆಗಳು ನಾಗರೀಕರಿಗೆ ವೇಗವಾಗಿ ತಲುಪುವುದಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಜನರ ಒಳಿತಿಗಾಗಿ ನಾವು […]