ಅಮೃತರು ಸಾಹಿತ್ಯ ಲೋಕದ ಮೇರು ಪರ್ವತ -ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ

Tuesday, January 9th, 2024
Amrutha-Someshwara

ಮಂಗಳೂರು : ಕಾವ್ಯ,ಕಥೆ,ನಾಟಕ, ಯಕ್ಷಗಾನ ಸಹಿತ ಸಾರಸ್ವತ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಅಮೃತ ಸೋಮೇಶ್ವರ ಅವರು ಸಾಹಿತ್ಯ ಲೋಕದ ಮೇರು ಪರ್ವತ. ಸದಾ ಹೊಸತನವನ್ನು ನಿರೂಪಿಸಿದ ಅಮೃತರು ರಾಷ್ಟ್ರ ಕವಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು ಎಂದು ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ ಹೇಳಿದರು. ಅಗಲಿದ ಹಿರಿಯ ಜಾನಪದ ತಜ್ಞ ಅಮೃತ ಸೋಮೇಶ್ವರ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ನಗರದ ಚಿಲಿಂಬಿಯ ಶಾರದಾ ನಿಕೇತನದಲ್ಲಿ ಏರ್ಪಡಿಸಲಾದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ […]

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ನಿಧನ

Monday, August 8th, 2016
Bola-Chittaranjan-Das-Shetty

ಮಂಗಳೂರು: ಖ್ಯಾತ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ (72) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಆತ್ಮೀಯ ಬಳಗಕ್ಕೆ ಆಘಾತವುಂಟು ಮಾಡಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಜನಿಸಿದ ಚಿತ್ತರಂಜನ್ ದಾಸ್ ಶೆಟ್ಟಿ 1973ರಲ್ಲಿ ‘ಪೊಣ್ಣು ಮಣ್ಣು ಬೊಂಬೆ’ ಎಂಬ ತುಳು ನಾಟಕ ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆ ಮುಡಿಸಿದ್ದರು. 1983ರಲ್ಲಿ ತುಳುನಾಡಿನ ವಿಶಿಷ್ಟ ಕ್ರೀಡೆ ‘ಕಂಬುಲ’ದ ಕುರಿತು ಪ್ರಬಂಧವನ್ನು ರಚಿಸುವ ಮೂಲಕ […]