ಯಶಸ್ವಿಗೊಂಡ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಸ್ಪರ್ಧೆ

Thursday, December 12th, 2024
siri-danya

ಮಂಗಳೂರು: ಸಿರಿಧಾನ್ಯಗಳಿಂದ ತಯಾರಿಸಿದ ಪಲಾವ್, ಉಪ್ಪಿಟ್ಟು, ಕಡುಬು, ದೋಸೆ, ಪತ್ರೊಡೆ, ಹೋಳಿಗೆ, ಮತ್ತೊಂದೆಡೆ ಕರಾವಳಿಯ ಸಾಂಪ್ರದಾಯಿಕ ಪುರಾತನ ಖಾದ್ಯಗಳಾದ ಕಲ್ತಪ್ಪ, ಪಜೆ ಮಡಿಕೆ, ಚಿಲಿಬಿ (ಕೊಟ್ಟಿಗೆ) ಅಡ್ಯೆ, ರಾತ್ರಿ ಉಳಿದ ಅನ್ನದಿಂದ ತಯಾರಿಸಿದ ತಂಗಳನ್ನ ಗಂಜಿ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯಮೇಳ ಪ್ರಯುಕ್ತ ಮಂಗಳವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕಂಡು ಬಂದ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ ತಿನಿಸುಗಳು ಇವು. ಜಿಲ್ಲೆಯ ವಿವಿಧ […]

ಸಿರಿಧಾನ್ಯಗಳೇ ವರದಾನ : ಡಾ.ಖಾದರ್

Wednesday, February 19th, 2020
Alvas

ಮೂಡುಬಿದಿರೆ : ಆಹಾರದ ಬಗ್ಗೆ ಚೆನ್ನಾಗಿ ಅರಿತಿರುವ ಮನುಷ್ಯನಿಗೆ ಔಷದಿಯ ಅಗತ್ಯವಿಲ್ಲ. ಆಹಾರದ ಅರಿವಿಲ್ಲದಿದ್ದರೆ ಔಷದಿಯೇ ಆತನ ಆಹಾರವಾಗುವುದು ಎಂದು ಮೈಸೂರಿನ ಖ್ಯಾತ ಆಹಾರ ತಜ್ಞ, ಆರೋಗ್ಯ ವಿಜ್ಞಾನ ಸಂತರಾದ ಡಾ.ಖಾದರ್ ಹೇಳಿದರು. ಆಳ್ವಾಸ್ ಕಾಲೇಜಿನ ಡಾ.ವಿ ಎಸ್ ಆಚಾರ್ಯ ಸಂಭಾಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮನುಕುಲದ ಶ್ರೆಯಸ್ಸಿಗೆ ನೆಮ್ಮದಿಯ ಬದುಕಿಗೆ ಸಿರಿದಾನ್ಯಗಳ ವರದಾನ ಎಂಬ ವಿಷಯದ ಕುರಿತು ಮಾತನಾಡಿದರು. ನಮ್ಮ ಆಹಾರವೇ ಜಗತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯಲು ಕಾರಣವಾಗುತ್ತಿದೆ. ಪ್ರಸ್ತುತ ರೋಗಗಳಿಗೆ ನಾವು ಸೇವಿಸುವ ಆಹಾರವೇ […]