ನೇತ್ರಾವತಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ : ವೇದವ್ಯಾಸ ಕಾಮತ್

Friday, August 2nd, 2019
cctv

ಮಂಗಳೂರು :  ನೇತ್ರಾವತಿ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಾಗುವು ದೆಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಳಿಕ ಮಂಗಳೂರು- ಉಳ್ಳಾಲ ರಸ್ತೆಯಲ್ಲಿನ ನೇತ್ರಾವತಿ ಸೇತುವೆ ಹೆಚ್ಚು ಸುದ್ದಿಯಲ್ಲಿದೆ. “ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ನೆಲೆಯಾಗುತ್ತಿದೆ. ಸಿಸಿ ಟಿವಿಗಳನ್ನು ಅಳವಡಿಸಿದರೆ ಸೇತುವೆ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ […]

20ರೊಳಗೆ ಜಿಪಿಎಸ್ ಕಡ್ಡಾಯ

Monday, February 10th, 2014
GPS

ನವದೆಹಲಿ:  ಫೆ.20ರೊಳಗೆ ಜಿಪಿಎಸ್ ಸಾಧನ ಅಳವಡಿಸಿ. ಇದು ಕೇಂದ್ರ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡಿರುವ ಗಡುವು. 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಪ್ರಮುಖ ನಗರಗಳಲ್ಲಿ ಸಂಚರಿಸುವ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಆದೇಶ ನೀಡಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಮಾಲೀಕರು 20ರೊಳಗೆ ತಮ್ಮ ವಾಹನಗಳಲ್ಲಿ ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಬೇಕು. ತಪ್ಪಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಹಿಂದೆ ಜಿಪಿಎಸ್ ಅಳವಡಿಕೆಗೆ […]