ಅಂತಾರಾಷ್ಟ್ರೀಯ ಹಾಕಿಗೆ ಖ್ಯಾತ ಡಿಫೆಂಡರ್ ಸುನೀತಾ ಲಾಕ್ರ ವಿದಾಯ
Friday, January 3rd, 2020ನವದೆಹಲಿ : ಭಾರತೀಯ ವನಿತಾ ತಂಡದ ಖ್ಯಾತ ಡಿಫೆಂಡರ್ ಸುನೀತಾ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಘೋಷಿಸಿದರು. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ತಾನು ಈ ಕಠಿನ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು ಎಂದರು. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್ ಕನಸು ಛಿದ್ರಗೊಂಡಿದೆ. “ಇಂದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದರು. ಸುನೀತಾ ಲಾಕ್ರಾ 2008ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದರು. 2018ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ […]