ಸುರತ್ಕಲ್ ಟೋಲ್ ಗೇಟ್ ಶೀಘ್ರದಲ್ಲೇ ತೆರವು

Thursday, February 11th, 2021
tollgate

ಮಂಗಳೂರು : ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ.ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಇಂದು ರಾಜ್ಯದ ಸಂಸದರ ಸಭೆ ಮಾನ್ಯ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಶ್ರೀ. ನಿತಿನ್ ಗಡ್ಕರಿಯವರ ನಿವಾಸದಲ್ಲಿ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ರಾಜ್ಯದ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವುದರ ಬಗ್ಗೆ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸಿದರು. ರಾಷ್ಟ್ರೀಯ ಹೆದ್ದಾರಿ 169 […]

9ನೇ ದಿನವೂ ಮುಂದುವರಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ!

Wednesday, October 31st, 2018
toll-gate

ಮಂಗಳೂರು: ಇಲ್ಲಿನ ಟೋಲ್ ಗೇಟ್ ನವೀಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಟೋಲ್ ಮುಚ್ಚಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಸಮಿತಿಯ ಹಗಲಿರುಲು ನಡೆಸುತ್ತಿರುವ ಧರಣಿ 9ನೇ ದಿನವೂ ಮುಂದುವರಿದಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ತಾತ್ಕಾಲಿಕ ಎಂದು ಆರಂಭವಾದ ಸುರತ್ಕಲ್ ಟೋಲ್ ಗೇಟ್ ಮೂರು ವರ್ಷವಾದರೂ ತೆರವುಗೊಳ್ಳದಿರುವುದು ಅಕ್ಷಮ್ಯ ಅಪರಾಧ. ಅಲ್ಲದೆ ಇದನ್ನು ಹೆಜಮಾಡಿಯ ಟೋಲ್ನೊಂದಿಗೆ ವಿಲೀನಗೊಲಿಸುವ ನಿರ್ಧಾರವನ್ನು ಜಾರಿಗೊಳಿಸದಿರುವ ಹಿಂದಿನ ಉದ್ದೇಶವೇನು? ಕೂಳೂರು ಸೇತುವೆ ಕುಸಿಯುವ ಭೀತಿಯಲ್ಲಿದೆ. ಆದರೆ ಸಂಸದ ನಳಿನ್ […]

4ನೇ ದಿನಕ್ಕೆ ಕಾಲಿಟ್ಟ ಸುರತ್ಕಲ್ ಟೋಲ್ ಗೇಟ್ ವಿರೋಧಿ ಧರಣಿ

Friday, October 26th, 2018
surathkal

ಮಂಗಳೂರು: ಸುರತ್ಕಲ್ನಲ್ಲಿರುವ ಅಕ್ರಮ ಟೋಲ್ ಗೇಟ್ ಮುಚ್ಚಬೇಕೆಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಟೋಲ್ ಗೇಟ್ ಗುತ್ತಿಗೆ ನವೀಕರಣ ವಿರುದ್ಧ ಹೋರಾಟ ನಡೆಯುತ್ತಿರುವಂತೆಯೇ, ಹೆದ್ದಾರಿ ಪ್ರಾಧಿಕಾರ ಒಂದು ವರ್ಷಕ್ಕೆ ಟೋಲ್ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿದೆ ಎಂಬ ಸುದ್ದಿ ಹರಡಿತ್ತು‌. ಇದರಿಂದ ಧರಣಿ ನಿರತರು ಆಕ್ರೋಶ ಭರಿತರಾಗಿ ಘೋಷಣೆ ಕೂಗಲಾರಂಭಿಸಿದರು. ಜಿಲ್ಲಾಧಿಕಾರಿ ಪರವಾಗಿ, ಎಸಿ ರವಿಚಂದ್ರ ನಾಯಕ್ ಅವರು ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು […]