ಚೈನೀಸ್ ಕುಕ್ ಜೊತೆ ಪರಾರಿಯಾದ ಎರಡು ಮಕ್ಕಳ ತಾಯಿ

Thursday, January 27th, 2022
lovers

ಸುಳ್ಯ: ಇಬ್ಬರು ಮಕ್ಕಳ ತಾಯಿ ಚೈನೀಸ್ ಕುಕ್ ಜೊತೆ ಪರಾರಿಯಾದ ಘಟನೆ ಇಲ್ಲಿನ ಸುಳ್ಯದ ಪೈಚಾರು ಎಂಬಲ್ಲಿ ನಡೆದಿದೆ. ಅಸ್ಸಾಂ ಮೂಲದ ಕೋಗನ್ ತಾತಿ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದನು. ಆದರೆ ಜ. 25 ರಂದು ಆತನ ಪತ್ನಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ಆರಂಭಿಸಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ […]

ಕ್ಯಾಶ್ಯೂ ಫ್ಯಾಕ್ಟರಿ ಗೋಡೆ ಕುಸಿದು, ವ್ಯಕ್ತಿ ಸಾವು

Friday, November 5th, 2021
wall Colapse

ಸುಳ್ಯ: ಕ್ಯಾಶ್ಯೂ ಫ್ಯಾಕ್ಟರಿಯೊಂದರ ಗೋಡೆ ಮಗುಚಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸುಳ್ಯದ ಗಾಂಧಿನಗರ ಎಂಬಲ್ಲಿ ನಡೆದಿದೆ. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ, ಅಬ್ದುಲ್ ಖಾದರ್ ಎಂಬ ವ್ಯಾಪಾರಿ ಮೃತಪಟ್ಟಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜರಿ ವಸ್ತುಗಳ ವ್ಯಾಪಾರ ಹಾಗೂ ಹಳೆ ಕಟ್ಟಡಗಳ ಕಬ್ಬಿಣ ಸಾಮಗ್ರಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಕಳೆದ ವರ್ಷ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ವ್ಯವಹಾರ ಸ್ಥಗಿತಗೊಂಡಿತ್ತು. ಹೀಗಾಗಿ, […]

ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ, ಓರ್ವ ಮೃತ್ಯು

Thursday, March 11th, 2021
Marshid

ಸುಳ್ಯ : ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದ ನಾಲ್ವರಿಗೆ ಢಿಕ್ಕಿಯಾದ ಪಿಕಪ್ ವಾಹನ ಓರ್ವ ಯುವಕ ನನ್ನು ಬಲಿಪಡೆದು ಇತರ ಮೂವರನ್ನು ಗಂಭೀರ ಗೊಳಿಸಿದ ಘಟನೆ ಪೆರಾಜೆ ಎಂಬಲ್ಲಿ ಬುಧವಾರ ರಾತ್ರಿ ಸುಮಾರು 10.30ಕ್ಕೆ ನಡೆದಿದೆ. ಪಿಕಪ್ ವಾಹನವೊಂದು ವೇಗ ನಿಯಂತ್ರಣಕ್ಕೆಂದು ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬಳಿಕ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಮೃತ ಯುವಕನನ್ನು ದುಗ್ಗಲಡ್ಕ ನಿವಾಸಿ ಮುರ್ಷಿದ್ ಎಂದು ಗುರುತಿಸಲಾಗಿದೆ. ಮುರ್ಷಿದ್, ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ […]

ಅಸಿಯಾ ಇಬ್ರಾಹಿಂ ಕಲೀಲ್ ಬೆಂಬಲಕ್ಕೆ ನಿಂತ ಯುವಕನ ಮೇಲೆ ರಾಡ್ ನಿಂದ ಹಲ್ಲೆ

Friday, December 11th, 2020
Asiya

ಸುಳ್ಯ : ಪತಿ ಇಂದಲ್ಲ ನಾಳೆ ಬರುತ್ತಾರೆ ಎಂಬ ಆಶಯದಲ್ಲಿ ಅಸಿಯಾ ಇಬ್ರಾಹಿಂ ಕಲೀಲ್ ಮೂರನೇ ದಿನವೂ ಮತ್ತೆ ಚಪ್ಪಲು ಅಂಗಡಿ ತೆರೆದು ಧರಣಿ ಮುಂದುವರಿಸಿದ್ದಾರೆ. ಸಂದಾನ ಮಾತುಕತೆಗೆ ಬಾರದ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ತೆರಳಿದ್ದ ಆಸಿಯಾ  ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ್ದರು. ಆಸಿಯಾ ಬೆಂಗಾವಲಿಗೆ ನಿಂತಿದ್ದ ಇಬ್ಬರು ಯುವಕರ ಪೈಕಿ ಓರ್ವನಿಗೆ ಕಬ್ಬಿಣದ ರಾಡ್ ನಿಂದ  ಪತಿಯ ಕಡೆಯ  ಗುಂಪು ಹೊಡೆದು ಹಲ್ಲೆ ನಡೆಸಿದ್ದಾರೆ. ಇದು ದೊಡ್ಡ ಅನ್ಯಾಯ ಎಂದು ಸುಳ್ಯದಲ್ಲಿ ಧರಣಿ ನಿರತ ಕಟ್ಟೆಕಾರ್ಸ್ […]