ಸ್ತ್ರೀ ವೇಷದ ಶಕಪುರುಷ ಐತ್ತಪ್ಪ ಶೆಟ್ಟಿ ಸಂಸ್ಮರಣೆ

Thursday, January 21st, 2016
Ithappa shetty

ಉಪ್ಪಳ: ತೆಂಕುತಿಟ್ಟು ಯಕ್ಷಗಾನದಲ್ಲಿ ಹಲವು ಪಾತ್ರಚಿತ್ರಣಗಳನ್ನು ಸೃಜಿಸಿ, ರಂಗಬದ್ಧ ನಾಟ್ಯಗಳಿಂದ ಕಲೆಗೆ ಜೀವತುಂಬಿದ ದಿ| ಸ್ತ್ರೀವೇಷಧಾರಿ ಐತ್ತಪ್ಪ ಶೆಟ್ಟರು ಅಗಲಿ 4ದಶಕ ಸಂದ ಬಳಿಕ ಅವರ ಸಂಸ್ಮರಣೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ತೆಂಕಣ ಯಕ್ಷಗಾನದ ಸ್ತ್ರೀವೇಷಗಳಿಗೆ ಖಚಿತವಾದ ರಂಗನಡೆಯನ್ನು ರೂಪಿಸಿಕೊಟ್ಟು ಕೀರ್ತಿಶೇಷರಾದ ಐತ್ತಪ್ಪ ಶೆಟ್ಟರ ಕೊಡುಗೆಗಳ ಬಗ್ಗೆ ದಾಖಲಾತಿಯಾಗದೇ ಹೋದುದು ಚಾರಿತ್ರಿಕ ನಷ್ಟ. ಅವರು ಯಕ್ಷಪರಂಪರೆಗೆ ಅಸಾಮಾನ್ಯ ಕೊಡುಗೆಯನ್ನಿತ್ತ ಅನನ್ಯ ಕಲಾವಿದ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ […]