ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರಿಂದ ಮೂರು ಸ್ವರ್ಣ ಶಿಖರಗಳ ಸಮರ್ಪಣೆ

Monday, January 7th, 2013
Vittal Panchalingeshwara Temple

ಮಂಗಳೂರು : ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸ್ವರ್ಣ ಶಿಖರಗಳ ಸಮರ್ಪಣಾ ಸಮಾರಂಭವು ಏರ್ಪಟ್ಟಿದ್ದು ಇದರ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಿದ್ದರು. ಸಮಾರಂಭವನ್ನು ಕುರಿತಂತೆ ಮಾತನಾಡಿದ ಅವರು ದೇವಾಲಯಗಳ ಮೂಲರೂಪ ಮತ್ತು ಅವುಗಳ ಸಂರಕ್ಷಣೆ ದೊಡ್ಡ ಕಾರ್ಯವಾಗಿದ್ದು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮೂಲ ಸ್ವರೂಪದಲ್ಲೇ ನಿರ್ಮಾಣವಾಗಿರುವುದು ನಿಜಕ್ಕೂ ಅದ್ಭುತ. ಪರಂಪರೆ ರೂಪ ಉಳಿಸಿಕೊಂಡು ಪುನರ್‌ನವೀಕರಣ ನಡೆಯಬೇಕು. ವಿಟ್ಲ […]

ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪುಜೆ

Wednesday, February 23rd, 2011
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ

ಮಂಗಳೂರು :  ಮಂಗಳೂರಿನ ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ  ವರ್ಷಾವಧಿ ಮಹಾಪೂಜೆಯು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರಗಿತು. ಮೊದಲ ದಿನ ರಾತ್ರಿ  ಮಾರಿಯಮ್ಮ ಕ್ಷೇತ್ರದ ವಿಶೇಷ ಸಂಪ್ರದಾಯವಾದ ಹಾಲು ಉಕ್ಕಿಸುವ ಪೂಜೆಯೊಂದಿಗೆ ಆರಂಭವಾದ ಉತ್ಸವವು ಎರಡನೇ ದಿನದಂದು ಇಲ್ಲಿನ ಪರಂಪರೆಯಂತೆ ನೈವೇದ್ಯ ಬಲಿ, ರಾಶಿಪೂಜೆ, ಮಾರಿ ಉಚ್ಚಿಷ್ಠ, ಮೊದಲಾದ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು. ವರ್ಷಾವಧಿ ಮಹೋತ್ಸವಕ್ಕೆ ಫೆ.11ರಂದು ಪ್ರಸಾದ ಹಾರಿಸುವ ಮೂಲಕ ಈ ಬಾರಿಯ ಚಾಲನೆ […]