ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸ, ವಿಶ್ವ ಹಿಂದು ಪರಿಷತ್ ಪ್ರತಿಭಟನೆ

Wednesday, October 20th, 2021
VHP protest

ಮಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಖ್ಖರ ಮೇಲಿನ ದೌರ್ಜನ್ಯ, ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸವನ್ನು ಖಂಡಿಸಿ ವಿಶ್ವಹಿಂದು ಪರಿಷತ್ ವತಿಯಿಂದ  ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆ ದ್ವಾರದ ಬಳಿ ಸೇರಿದ ನೂರಾರು ಕಾರ್ಯಕರ್ತರು ಬಾಂಗ್ಲಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾ ಸರಕಾರದ ನಡೆಯನ್ನು ಖಂಡಿಸಿದರು. ಅಲ್ಲದೆ ಕೆಲಹೊತ್ತು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ […]

ಹಿಂದೂ ದೇವಾಲಯಗಳ ಹಣ ಮದ್ರಸ ಇಮಾಮಗಳಿಗೆ ತಸ್ತೀಕ್ ರೂಪದಲ್ಲಿ ನೀಡಿದ ಸರಕಾರ

Wednesday, June 9th, 2021
VHP appeal

ಮಂಗಳೂರು :  ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾಧ್ಯಮದ ಮೂಲಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯದಲ್ಲಿ ನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ […]

ಸರಕಾರಕ್ಕೆ ಹಿಂದೂ ದೇವಾಲಯಗಳ ಆದಾಯ ಬೇಕಿದ್ದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಎಂ. ನಾಗೇಶ್ವರ ರಾವ್

Sunday, January 10th, 2021
sanathana

ಮಂಗಳೂರು  : 2020 ರಲ್ಲಿ ಆಂಧ್ರಪ್ರದೇಶದಲ್ಲಿ 228 ದೇವಾಲಯಗಳಲ್ಲಿ ವಿಧ್ವಂಸದ ಘಟನೆಗಳು ನಡೆದಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೂವಿರೋಧಿ ಘಟನೆಗಳ ಹಿಂದೆ ಯೋಜಿತ ಪಿತೂರಿ ಇದೆ. ವಾಸ್ತವದಲ್ಲಿ ಸರಕಾರವು ಎಲ್ಲಾ ಧರ್ಮಗಳಿಗೆ ಭದ್ರತೆಯನ್ನು ಒದಗಿಸಬೇಕು; ಆದರೆ ಸರ್ಕಾರ ಒಂದು ನಿರ್ದಿಷ್ಟ ಧರ್ಮದತ್ತ ವಾಲುತ್ತಿದೆ. ಇದು ಜಾತ್ಯತೀತತೆಯ ಲಕ್ಷಣವಲ್ಲ. ಹಿಂದೂ ಸಮುದಾಯವು ಒಗ್ಗೂಡಿ ಆಂಧ್ರಪ್ರದೇಶ ಸರಕಾರವು ಆಕ್ರಮಿಸಿಕೊಂಡಿರುವ 24,632 ದೇವಾಲಯಗಳ ರಕ್ಷಣೆಗಾಗಿ ‘ಶ್ಯಾಡೋ ಕ್ಯಾಬಿನೆಟ್’ನಂತಹ ‘ಶ್ಯಾಡೋ’ ಟ್ರಸ್ಟ್‌ಗಳನ್ನು ಪ್ರತಿಯೊಂದು ದೇವಾಲಯಗಳಲ್ಲಿ ಸ್ಥಾಪಿಸುವ ಮೂಲಕ ಹೋರಾಡಬೇಕು. […]

ಭಾವೈಕ್ಯದ ದೀಪಾವಳಿ ಆಚರಣೆ: ವಿಹಿಂಪ ಮತ್ತು ವಿವಿಧ ಹಿಂದೂ ಸಂಘಟನೆಗಳ ವಿರೋಧ

Thursday, October 27th, 2016
kadri-temple

ಮಂಗಳೂರು: ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ಅ. 29ರಂದು ಭಾವೈಕ್ಯದ ದೀಪಾವಳಿ ಆಚರಣೆಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಸುವುದಕ್ಕೆ ವಿಹಿಂಪ ಮತ್ತು ವಿವಿಧ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಿಂದೂ ಧಾರ್ಮಿಕ ದತ್ತಿ ಕಾನೂನಿನ ಪ್ರಕಾರ ಅನ್ಯ ಮತೀಯರು ಹಿಂದೂ ದೇವಾಲಯಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಇರುವುಧಿದಿಲ್ಲ. ಹಿಂದೂಯೇತರರು ಕಾರ್ಯಕ್ರಮ ನಡೆಸುವುದರಿಂದ ದೇವಸ್ಥಾನದ ಆಚಾರ ವಿಚಾರಗಳಿಗೆ ಚ್ಯುತಿ ಬರುತ್ತದೆ ಮತ್ತು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಐವನ್‌ ಡಿ’ಸೋಜಾ ಅವರು […]