ಬೆಂಗಳೂರು: ಒಂದೇ ದಿನ 19 ಮಂದಿಗೆ ಕೋವಿಡ್-19 ಸೋಂಕು ದೃಢ ; ಇಬ್ಬರು ಸಾವು
Wednesday, April 15th, 2020ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 19 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ ಸಾವನ್ನಪ್ಪಿದ ಬೆಳಗಾವಿ ವೃದ್ಧೆಗೆ ಸೋಂಕು ಇತ್ತು ಎಂದು ಖಚಿತವಾಗಿದೆ. ಬುಧವಾರ ಬೆಳಿಗ್ಗೆ ಚಿಕ್ಕಬಳ್ಳಾಪುರದ ವ್ಯಕ್ತಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದರು. ಈಗ ಬೆಳಗಾವಿ, ಹಿರೇಬಾಗೆವಾಡಿಯ 80 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಾವಿನ ಸಂಖ್ಯೆ 12ಕ್ಕೇರಿದೆ. ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢವಾಗಿದೆ. ಸೋಂಕಿತ ಸಂಖ್ಯೆ 221 ರ ಸಂಪರ್ಕಕ್ಕೆ ಬಂದ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. […]