ಸಾಲದ ಭಯ : ಡೆತ್ ನೋಟ್ ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ
Thursday, December 30th, 2021ಕುಂದಾಪುರ : ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಘ್ನೇಶ್ ಸ್ನೇಹಿತರೊಂದಿಗೆ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡಲಾಗದೇ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ತಾನು ಸಾಲ ಮಾಡಿಕೊಂಡಿದ್ದಾಗಿ ಬರೆದಿರುವ ವಿಘ್ನೇಷ್ […]