ಧರ್ಮಸ್ಥಳ : ಬಸದಿಯಲ್ಲಿ ವಾರ್ಷಿಕೋತ್ಸವ

Friday, February 28th, 2020
basadi

ಉಜಿರೆ : ಹೇಮಾವತಿ ವಿ. ಹೆಗ್ಗಡೆಯವರು ಮೃತ್ಯುಂಜಯ ಆರಾಧನೆಗೆ ಚಾಲನೆ ನೀಡಿದರು. ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಬ್ರಹಚ್ಛಾಂತಿಯಂತ್ರಾರಾಧನೆ ಮತ್ತು ಸಾಮೂಹಿಕ ಮೃತ್ಯುಂಜಯ ಆರಾಧನೆ ನಡೆಯಿತು. ಇಂದು ಕಾರ್ಕಳ ಸ್ವಾಮೀಜಿ ಧರ್ಮಸ್ಥಳಕ್ಕೆ: ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಲಿದ್ದು ಬಸದಿಯಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾವಹಿಸಿ ಮಂಗಳ ಪ್ರವಚನ ನೀಡುವರು. ಸಂಜೆ ಗಂಟೆ5.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಚಂದ್ರನಾಥ […]

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನ ಉದ್ಘಾಟನೆ

Thursday, December 6th, 2018
dharmastala

ಮಂಗಳೂರು: ದಾನವನ್ನು‌‌ ಯಾವತ್ತೂ ಪರಿಶುದ್ಧ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡಬೇಕು. ದೇವರ ಅನುಗ್ರಹದಿಂದ ಗಳಿಸಿದ ಸಂಪತ್ತನ್ನು ಪರರ ಹಿತಕ್ಕಾಗಿ ದಾನ ಮಾಡಬೇಕು. ಇದರಿಂದ ಜೀವನದಲ್ಲಿ ಪರಿವರ್ತನೆ ಸಾಧ್ಯ ಎಂದು ಗುಜರಾತ್ ದ್ವಾರಕಾ ಸೂರ್ಯ ಪೀಠದ ಜಗದ್ಗುರು ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆಯುವ ದಾನ, ಧರ್ಮ, ಸ್ವಚ್ಛತಾ ಕೈಂಕರ್ಯ, ಗೋ ಸೇವೆ ಮುಂತಾದ ಕಾರ್ಯಗಳನ್ನು […]

ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Friday, March 30th, 2018
dharmastala

ಧರ್ಮಸ್ಥಳ: ದಿನಾಂಕ 29-03-18 ನೇ ಗುರುವಾರದಂದು ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿಗೆ ಜನ್ಮಾಭಿಷೇಕ, ಮಕ್ಕಳಿಂದ ಅಷ್ಟವಿಧಾರ್ಚನೆ ಪೂಜೆ, ನಾಮಕರಣ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಕುಟುಂಬದವರ ಮಾರ್ಗದರ್ಶನದಲ್ಲಿ ಬಾಹುಬಲಿ ಮಹಿಳಾ ಸೇವಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಊರ ಶ್ರಾವಕ ಶ್ರಾವಿಕಿಯರು ಪಾಲ್ಗೊಂಡು ಪುಣ್ಯಭಾಗಿಗಳಾದರು.

ಮುನಿಸಂಘ ಧರ್ಮಸ್ಥಳ ಪುರ ಪ್ರವೇಶ : ಭವ್ಯ ಸ್ವಾಗತ

Monday, January 22nd, 2018
dharmastala

ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಐತಿಹಾಸಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯು ಹವಳದ ಬಣ್ಣ ಹೊಂದಿರುವುದು ವಿಶಿಷ್ಟವಾಗಿದೆ. ಶಾಂತಚಿತ್ತರಾಗಿ ಈ ಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಪರಮಪೂಜ್ಯ ಆಚಾರ್ಯ ಶ್ರೀ 108 ದೇವನಂದಿ ಮಹಾರಾಜ್ ಹೇಳಿದರು. ಧರ್ಮಸ್ಥಳಕ್ಕೆ ತಮ್ಮ ಸಂಘದೊಂದಿಗೆ ಭಾನುವಾರ ಸಂಜೆ ಪುರ ಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ […]