ಇಂದಿನಿಂದ ಹುಬ್ಬಳ್ಳಿಯಿಂದ ಬೆಂಗಳೂರು, ಹೊಸದಿಲ್ಲಿಗೆ ವಿಮಾನಯಾನ ಆರಂಭ

Monday, May 25th, 2020
Hubballi Airport

ಹುಬ್ಬಳ್ಳಿ : ಕೊರೋನಾ ಸೋಂಕು ಪ್ರಸರಣ ತಡೆಗೆ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ಮಾರ್ಚ್‌ 25 ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸ್ಥಗಿತಗೊಂಡಿತ್ತು. ಹಂತ ಹಂತವಾಗಿ ಲಾಕ್‌ ಡೌನ್‌ ನಿರ್ಭಂದ ಸಡಿಲಿಸುತ್ತಿರುವ ಕೇಂದ್ರ ಸರಕಾರ ಮೇ.25 ಸೋಮವಾರದಿಂದ ದೇಶದಲ್ಲಿ ಆಂತರಿಕ ವಿಮಾನಯಾನ ಆರಂಭಿಸಲು ಅನುಮತಿ ನೀಡಿದೆ. ಹೀಗಾಗಿ ಸ್ಟಾರ್‌ ಏರಲೈನ್ಸ್‌ ವಿಮಾನಯಾನ ಸಂಸ್ಥೆಯು ಮೇ.25 ಸೋಮವಾರದಿಂದ ಹುಬ್ಬಳ್ಳಿಯಿಂದ ಹೊಸದಿಲ್ಲಿ (ಹಿಂಡಾನ್)‌ ಹಾಗೂ ಬೆಂಗಳೂರಿಗೆ ವಿಮಾನಯಾನ ಆರಂಭಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ […]