ಕುಸಿದು ಬಿದ್ದು ಮೃತಪಟ್ಟ ಹೋಟೆಲು ಕಾರ್ಮಿಕ, ಕೊರೊನಾ ಎಂದು ವದಂತಿ
Friday, May 29th, 2020ಉಪ್ಪಿನಂಗಡಿ : ಮನೆಯವರಿಂದ ದೂರವಾಗಿದ್ದ ಉಡುಪಿ ಮೂಲದ 56 ವರ್ಷ ವ್ಯಕ್ತಿಯೋರ್ವ ಪರಿಚಯಸ್ಥರ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಬೆಯಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿಯ ಹೊಟೇಲ್‌ವೊಂದರಲ್ಲಿ ಕಾರ್ಮಿಕರಾಗಿದ್ದರು. ಲಾಕ್ ಡೌನ್ ಕಾರಣದಿಂದ ಹೊಟೇಲ್ ಮುಚ್ಚಿದ ಕಾರಣ ಕಾರಣ ಅವರು ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿದ್ದರು. ಈ ನಡುವೆ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಯಾರೋ ವದಂತಿ ಹಬ್ಬಿಸಿದ್ದು, ಕೊರೊನಾ ಭಯದಿಂದಾಗಿ ಯಾರೂ ಕೂಡಾ ಶವದ ಬಳಿ ಬರಲು ಒಪ್ಪದೆ ಹೆಣ ಬೀದಿಯಲ್ಲಿಯೇ ಉಳಿಯುವಂತಾಯಿತು. ತಂದೆ ಮೃತಪಟ್ಟ ವಿಷಯ […]