ಪಿಲಿಕುಳದ ಸುಧಾರಣೆಗೆ ಅಗತ್ಯ ಕ್ರಮ: ಅರವಿಂದ ಲಿಂಬಾವಳಿ

Friday, July 9th, 2021
Aravinda Limbavali Pilikula

ಮಂಗಳೂರು : ಪಿಲಿಕುಳ ನಿಸರ್ಗ ಧಾಮದ ಸುಧಾರಣೆಗೆ ಕೇಂದ್ರ ಸಚಿವರು ಹಾಗೂ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಅರಣ್ಯ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು. ಅವರು ಜು.9ರ ಶುಕ್ರವಾರ ನಗರಕ್ಕೆ ಅನತಿ ದೂರದಲ್ಲಿರುವ ಪಿಲಿಕುಳ ನಿಸರ್ಗ ಧಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪಿಲಿಕುಳದ ಮೃಗಾಯಲವನ್ನು ವೀಕ್ಷಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದರು. ಪಿಲಿಕುಳದಲ್ಲಿರುವ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ […]

ಕಟೀಲಿನಲ್ಲಿ ನಾಗಮಂಡಲದಲ್ಲಿ ಭಾಗಿಯಾಗಿ ಪುನೀತರಾದ ಭಕ್ತ ಸಮೂಹ

Monday, February 3rd, 2020
nagamandala

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ 01-02-2020 ಶನಿವಾರ ರಂದು ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣ ಪ್ರಸಾದ ವೈದ್ಯ ಬಳಗದವರಿಂದ ನಾಗಮಂಡಲೋತ್ಸವ ನಡೆಯಿತು. ಸುಮಾರು 2ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾದರು. ಸುಮಾರು 2 ಲಕ್ಷ ಮಂದಿ ಅನ್ನ ಪ್ರಸಾದ ಮತ್ತು ಫಲಾಹಾರ ಸ್ವೀಕರಿಸಿ ದರು. ನಾಗಮಂಡಲ ವೀಕ್ಷಣೆಗೆ ಬಸ್‌ ನಿಲ್ದಾಣ, ರಥಬೀದಿ, ಭೋಜನ ಶಾಲೆ ಮತ್ತಿತರ 10 ಕಡೆಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರ ದರ್ಶನಕ್ಕೆ ಸರತಿ ಸಾಲು […]

ಕದ್ರಿಯಲ್ಲಿ ಕಲಾವಿದ ಮೋಹನ್ ಶೆಟ್ಟಿಗಾರ್ ಮಿಜಾರ್ ದಂಪತಿಗಳಿಗೆ ಸನ್ಮಾನ

Monday, December 11th, 2017
mohan-shettiger

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರ ಮೇಳದಲ್ಲಿರುವ ಹಿರಿಯ ಯಕ್ಷಗಾನ ಚೆಂಡೆಮದ್ದಳೆ ಕಲಾವಿದಳನ್ನು ಇತ್ತೀಚೆಗೆ ಕದ್ರಿ ದೇವಸ್ಥಾನ ಬಳಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಜಾರುಬೀಡು ಪ್ರದೀಪ್ ಆಳ್ವ ಕದ್ರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಡಾ. ಕೆ. ಕೃಷ್ಣಭಟ್ ತಿರುಪತಿ, ವೆಂಕಪ್ಪ ಕಾಜವ ಪಟ್ಟೋರಿ, ಮಧುಕರ ಮಲ್ಲಿ ಕಾವೂರು, ಪಟ್ಲ ಸತೀಶ್ ಶೆಟ್ಟಿ, ಪ್ರದೀಪ್ ಕಲ್ಕೂರ, […]

ಕಟೀಲು ದೇವಿಯ ಅವಹೇಳನ ಪೋಸ್ಟ್‌ ಪ್ರಕರಣ: ಮುಂಬೈನಲ್ಲಿರುವ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿದ ಪೊಲೀಸರು

Friday, December 9th, 2016
Mumbai-facebook-office

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅವಹೇಳನ ಪೋಸ್ಟ್‌ ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆ ಮುಂಬೈನಲ್ಲಿರುವ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿದ ಪೊಲೀಸರು, ಅಲ್ಲಿಯ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕುರಿತ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಫೇಸ್‍ಬುಕ್ ಅಸಹಕಾರ ತೋರಿದ ಹಿನ್ನೆಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಪೊಲೀಸರು ಹಾಗೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಜಂಟಿಯಾಗಿ ಮುಂಬೈನಲ್ಲಿರುವ ಫೇಸ್‍ಬುಕ್ ಕಚೇರಿಗೆ […]

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿ: ಮಹಿಳಾ ಭಕ್ತರಿಗೆ ಸೀರೆ ವಿತರಣೆ

Saturday, October 8th, 2016
lalitha-panchami

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಲಲಿತಾ ಪಂಚಮಿ ವಿಶೇಷ ಆಚರಣೆ ನಡೆಯಿತು. ಬೆಳಗ್ಗೆ ದೇಗುಲದಲ್ಲಿ ಮಹಾ ಚಂಡಿಕಾ ಹವನ ನಡೆಯಿತು. ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ರಾತ್ರಿ ರಂಗ ಪೂಜೆ ನಡೆಯಿತು. ಮಧ್ಯಾಹ್ನ 17,000 ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ಸೀರೆಗಳನ್ನು ವಿತರಿಸಲಾಯಿತು. 35,000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ದೇಗುಲದ ಮೊಕ್ತೇಸರಾದ ವಾಸುದೇವ ಆಸ್ರಣ್ಣ, ಡಾ| ರವೀಂದ್ರನಾಥ ಪೂಂಜಾ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ […]

ಶ್ರೀ ಸಂಜೀವ ಶ್ರೀನಿವಾಸ ರಾವ್ ಕಟೀಲು ನಿಧನ

Thursday, April 2nd, 2015
Sanjeeva Srinivasa

ಮುಂಬಯಿ : ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮುಂಬಯಿ ಪ್ರಾಂತ್ಯದ ಮಾಜಿ ಕಾರ್ಯಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ವೈದ್ಯಕೀಯ ಸಲಹಾಗಾರ ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ತುಳು-ಕನ್ನಡಿಗ ವೈದ್ಯಾಧಿಕಾರಿ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಜನಕ, ಸಂಜೀವನಿ ಟ್ರಸ್ಟ್ ಮುಂಬಯಿ ಇದರ ವಿಶ್ವಸ್ಥ ಕಾರ್ಯಾಧ್ಯಕ್ಷ ಕಟೀಲು ಸಂಜೀವ ರಾವ್ (90.) ಅವರು ಕಳೆದ ಬುಧವಾರ ಸಂಜೆ ತಮ್ಮ ಕಟೀಲು ಅಲ್ಲಿನ ಸ್ವನಿವಾಸದಲ್ಲಿ ನಿಧನರಾದರು. ಕಟೀಲು […]