ಎ.ಐ.ಸಿ.ಸಿ.ಕಾರ್ಯದರ್ಶಿಯಾಗಿ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜ ನೇಮಕ

Saturday, December 19th, 2020
IvanDSouza

ಮಂಗಳೂರು  : ಎ.ಐ.ಸಿ.ಸಿ.ಕಾರ್ಯದರ್ಶಿಯಾಗಿ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜರವರು ನೇಮಕ-ಕೇರಳ ರಾಜ್ಯದ ಹೊಣೆಗಾರಿಕೆ; ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ಇವರು ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ, ವಿಧಾನ ಪರಿಷತ್ ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜರವರನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಕೂಡಲೇ ಜಾರಿಗೆ ತರುವಂತೆ ನೇಮಕ ಮಾಡಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಆಡಳಿತ) ಶ್ರೀ ಕೆ.ಸಿ.ವೇಣುಗೋಪಾಲ್ ಇವರು ಆದೇಶವನ್ನು ಹೊರಡಿಸಿದ್ದಾರೆ. […]

ಗೋಲ್ಡ್ ಸ್ಮಗ್ಲರ್ ಸ್ವಪ್ನಾ ಸುರೇಶ್ ‌ ಗೆ ಮುಖ್ಯಮಂತ್ರಿ ಪಿಣರಾಯಿ ಜೊತೆ ನಂಟು, ಮಾಜಿ ಕಾರ್ಯದರ್ಶಿ ಮಾರ್ಗದರ್ಶಕ

Saturday, August 8th, 2020
pinarayi swapna

ಕೊಚ್ಚಿ : ಕೇರಳದ  ಮುಖ್ಯಮಂತ್ರಿ ಪಿಣರಾಯಿ ವಿಜಯ್‌ ಜೊತೆ ‘ಸಾಮಾನ್ಯ ಸಂಪರ್ಕ’ ಇದೆ ಎಂದು  ಬಹುಕೋಟಿ ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನಾ ಸುರೇಶ್‌ ಒಪ್ಪಿಕೊಂಡಿದ್ದಾಳೆ. ಹಗರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಕೋರ್ಟ್‌ಗೆ ಈ ವಿಷಯವನ್ನು ತಿಳಿಸಿದೆ. ಅದರೊಂದಿಗೆ, ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಕೂಡ ಭಾಗಿಯಾದ್ದು, ಅವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ. ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ತನ್ನ ಮಾರ್ಗದರ್ಶಕ ಎಂದೂ ಹೇಳಿದ್ದಾಳೆ. […]

ಅವ್ಯವಹಾರ ಸಾಬೀತು-ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಅಮಾನತು

Saturday, August 6th, 2016
Jagadeesh

ಕುಂಬಳೆ: ಕರ್ತವ್ಯ ವೇಳೆ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಕಾರ್ಯದರ್ಶಿಯಾಗಿದ್ದ ಪುತ್ತಿಗೆ ನಿವಾಸಿ ಜಗದೀಶ್ ರೈ. ಪಿ.ಎ ರನ್ನು ಸೇವೆಯಿಂದ ವಜಾ ಮಾಡ ಲಾಗಿದೆಯೆಂದು ಬ್ಯಾಂಕ್‌ನ ಅಧ್ಯಕ್ಷ ಕೆ. ಶಂಕರ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಗದೀಶ್ ರೈ ಅವ್ಯವಹಾರ ನಡೆಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದಂತೆ ಅವರನ್ನು 2016 ಜನವರಿ 1ರಿಂದ 6 ತಿಂಗಳಿಗೆ ಅಮಾನತುಮಾಡಲಾಗಿತ್ತು. ಅವರ ಮೇಲಿನ ಆರೋಪಗಳು ಸಾಬೀತು ಗೊಂಡ ಹಿನ್ನೆಲೆಯಲ್ಲಿ ಅವರನ್ನು ಇದೀಗ 2016 ಜುಲೈ 22ರಿಂದ ಸೇವೆಯಿಂದ ವಜಾಮಾಡ ಲಾಗಿದೆ. […]