ಸುಳ್ಯ : ಪತ್ರಕರ್ತ ಚಂದ್ರೇಶ್ ಗೋರಡ್ಕ ಅನಾರೋಗ್ಯದಿಂದ ನಿಧನ

Monday, August 26th, 2019
Chandesh

ಸುಳ್ಯ: ಹಿರಿಯ ಪತ್ರಕರ್ತ ಚಂದ್ರೇಶ್ ಗೋರಡ್ಕ ರವಿವಾರ ತಡ ರಾತ್ರಿ ಸುಮಾರು 2.30 ಕ್ಕೆ ನಿಧನರಾದರು. ಅವರಿಗೆ 48 ವರ್ಷದ ಚಂದ್ರೇಶ್ ಗೋರಡ್ಕ ಅವರು ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾಗಿದ್ದರು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ 3 ವಾರ ಚಿಕಿತ್ಸೆ ಪಡೆದಿದ್ದರು. ಮತ್ತೆ ಲಿವರ್ ಹಾಗೂ ಕಿಡ್ನಿ ವೈಫಲ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾರದ ಹಿಂದೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿ , ಇಬ್ಬರು ಪುತ್ರರನ್ನು ಅಗಲಿದ್ದಾರೆ.    

ಖಾಸಗಿ ಬಸ್ ಉದ್ಯಮಿ ನಾಪತ್ತೆ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

Thursday, August 11th, 2016
Narayana-Alwa

ಮಂಗಳೂರು: ನಗರದ ಖಾಸಗಿ ಬಸ್ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೆಪ್ಪಿನಮೊಗರು ನಿವಾಸಿ ನಾರಾಯಣ ಆಳ್ವ (60) ಎಂಬುವರು ಇಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾರೆ. ಮನೆ ಮಂದಿ ಆಳ್ವರಿಗಾಗಿ ಹುಡುಕಿ ಬಳಿಕ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ನಂತರ ನೇತ್ರಾವತಿ ಸೇತುವೆ ಬಳಿ ಆಗಮಿಸಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆಳ್ವರ ಕಾರು ಉಳ್ಳಾಲ ಸೇತುವೆಯಲ್ಲಿ ಪತ್ತೆಯಾಗಿದೆ. ಕಾರನ್ನು ಠಾಣೆಯಲ್ಲಿರಿಸಿದ್ದಾರೆ. […]