ಮರಕಡ ವಾರ್ಡಿನಲ್ಲಿ ಕೃಷಿ ಸಚಿವರಿಂದ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನಕ್ಕೆ ಚಾಲನೆ

Friday, June 25th, 2021
BC-Patil

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕುಂಜತ್ತಬೈಲ್ ಪ್ರದೇಶದ ಮರಕಡ ವಾರ್ಡಿನ ದಿ. ಕಾಂತಣ್ಣ ಶೆಟ್ಟಿ ಕೊಂರ್ಗಿಬೈಲ್ ಇವರ ಹಡೀಲು ಬಿಟ್ಟ ಜಮೀನಿನಲ್ಲಿ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನದ ಅಂಗವಾಗಿ ರಾಜ್ಯದ ಮಾನ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಯಾಂತ್ರೀಕೃತ ಭತ್ತದ ಕೃಷಿ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಭಾಜಪಾ ಉತ್ತರ ಮಂಡಲ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, […]

ಮಂಗಳೂರು : ಕುಂಜತ್ತಬೈಲ್​​​​ನಲ್ಲಿ‌ ಇಂಡಿಯನ್ ಕೋಸ್ಟ್‌ಗಾರ್ಡ್ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ

Friday, December 6th, 2019
Athmahatye

ಮಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡ ಇಂಡಿಯನ್ ಕೋಸ್ಟ್‌ಗಾರ್ಡ್ ಅಧಿಕಾರಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುಂಜತ್ತಬೈಲ್ನಲ್ಲಿ‌ ನಡೆದಿದೆ. ಹರಿಯಾಣ ಮೂಲದ ಪ್ರಸ್ತುತ ಕುಂಜತ್ತ್‌ಬೈಲ್ನಲ್ಲಿ ವಾಸವಾಗಿರುವ ಪವನ್‌ಕುಮಾರ್ (40) ಆತ್ಮಹತ್ಯೆ ಮಾಡಿಕೊಂಡವರು. ಇಂಡಿಯನ್ ಕೋಸ್ಟ್‌ಗಾರ್ಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪವನ್‌ ಕೌಟುಂಬಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆಂದು ತಿಳಿದು ಬಂದಿದೆ. ಕೆಲವು ದಿನಗಳಿಂದ ಕೆಲಸಕ್ಕೆ ರಜೆ ಹಾಕಿದ್ದ ಇವರು, ನಿನ್ನೆ ಬೆಳಗ್ಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದು, ಮೃತದೇಹದ […]

ಡಿಸೆಂಬರ್ 10 ರಂದು ಪಟ್ಲ ಯಕ್ಷಾಶ್ರಯದ 3ನೇ ಮನೆಯ ಗೃಹಪ್ರವೇಶ

Thursday, December 6th, 2018
sathish-patla

ಮಂಗಳೂರು: ಕುಂಜತ್ತಬೈಲ್ ಎಂಬಲ್ಲಿ ಯಕ್ಷಗಾನ ಕಲಾವಿದರಾದ ಪುರಂದರ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮನೆಯನ್ನು ನಿರ್ಮಿಸಿಕೊಡಲಾಗುತ್ತಿದ್ದು, ಗೃಹಪ್ರವೇಶದ ಬಗ್ಗೆ ಕುಂಜತ್ತಬೈಲ್ ಅಯ್ಯಪ್ಪ ಮಂದಿರದ ಆವರಣದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಸಭೆ ಸೇರಿ ಸಿದ್ಧತೆಗಳ ಬಗ್ಗೆ ನಿರ್ಧರಿಸಲಾಯಿತು. ಡಿಸೆಂಬರ್ 10ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವಿ ನಿಲಯ, ಪಟ್ಲ ಯಕ್ಷಾಶ್ರಯ – 3 ಇದರ ಗೃಹಪ್ರವೇಶ ನೆರವೇರಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಕಟನೆ ತಿಳಿಸಿದೆ. ಇದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ನಿರ್ಮಿಸಿಕೊಡುತ್ತಿರುವ ಮೂರನೇ ಮನೆಯಾಗಿದೆ. ಸಮಾರಂಭದಲ್ಲಿ ಪಟ್ಲ ಫೌಂಡೇಶನ್ […]