ರಾಜ್ಯ ಬಜೆಟ್ : ಗ್ರಾಮೀಣ ಅಭಿವೃದ್ಧಿಯ ಜೊತೆಗೆ ನಗರ ಅಭಿವೃದ್ಧಿಗೆ ವಿಶೇಷ ಆದ್ಯತೆ

Thursday, February 24th, 2011
ರಾಜ್ಯ ಬಜೆಟ್

ಬೆಂಗಳೂರು : ರಾಜ್ಯ ಸರಕಾರದ ಆಡಳಿತಾವದಿಯ ಎರಡೂವರೆ ವರ್ಷದ ಅವದಿಯಲ್ಲಿ ಸತತವಾಗಿ ಆರನೇ ಬಾರಿಗೆ  ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನ್ನದಾತನ ಹೊಲದಲ್ಲಿ ಚಿನ್ನದ ಹೊಳೆಯನ್ನೇ ಹರಿಸಿದ್ದಾರೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ಎಂದಿಗೂ ಅನ್ನದಾತರ ಪರ ಎಂದ ಸಿಎಂ, ರೈತರ ನಾಡಗೀತೆ ‘ನೇಗಿಲ ಹಿಡಿದು.. ಉಳುವ ಯೋಗಿಯ..’ ಸಾಲುಗಳನ್ನು ಹೇಳಿದರು. ನಂತರ ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುತ್ತಾ ಆಯವ್ಯಯ ಪತ್ರವನ್ನು ಸದನದಲ್ಲಿ ಮಂಡಿಸಿದರು. ಕೃಷಿ ಬಜೆಟ್ ಮಂಡಿಸಿದ ಬಳಿಕ  […]

ಫೆಬ್ರುವರಿ 24ರಂದು ರಾಜ್ಯದ ಮುಂಗಡ ಪತ್ರ ಮಂಡನೆ

Thursday, February 3rd, 2011
VS Acharya

ಬೆಂಗಳೂರು : ಇಂದು ನಡೆದ  ಸಚಿವ ಸಂಪುಟದ ಸಭೆಯಲ್ಲಿ ಪ್ರಸಕ್ತ ಸಾಲಿನ ಮುಂಗಡ ಪತ್ರ ಮಂಡನೆಯ ಬಗ್ಗೆ ಚರ್ಚೆ ನಡೆದಿದ್ದು, ಅದರಂತೆ ಫೆಬ್ರುವರಿ 24ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿದ್ದಾರೆ ಎಂದು ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ,  15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ.  ಲೋಕಾಯುಕ್ತ ಸಿಬ್ಬಂದಿ ವೇತನ ಶೇ.10ರಷ್ಟು ಏರಿಕೆ, ರಾಜ್ಯದಲ್ಲಿರುವ ಸುಮಾರು 1.5 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ ಎಂದರು. ಗಡಿನಾಡ ಅಭಿವೃದ್ಧಿಗೆ […]