ಕೊರಗಜ್ಜ ದೈವದ ವೇಷ-ಭೂಷಣ ಧರಿಸಿ ಅಪಮಾನ ಮಾಡಿದ ಮದುಮಗ- ವಿಹೆಚ್‌‌ಪಿ, ಬಜರಂಗದಳದ ಕಾರ್ಯಕರ್ತರ ಪ್ರತಿಭಟನೆ

Friday, January 7th, 2022
Koragajja-daiva

ವಿಟ್ಲ : ಮದುವೆ ಮನೆಯಲ್ಲಿ ನಡೆದ  ಔತಣಕೂಟದಲ್ಲಿ ಮದುಮಗನೊಬ್ಬ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನಿಗೆ ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿ  ಮದುಮಗಳ ಮನೆಗೆ ವಿಹೆಚ್‌ಪಿ, ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿಟ್ಲದ ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ವಿಟ್ಲ ಪ್ರಖಂಡ ವಿಹೆಚ್‌‌ಪಿ, ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನೊಂದಿಗೆ ನಿಕಾಹ್ ಮಧ್ಯಾಹ್ನ ವೇಳೆಗೆ ನಡೆದಿದ್ದು, ಸಂಜೆ ವೇಳೆ ಔತಣಕೂಟವನ್ನು ಏರ್ಪಡಿಸಿದ್ದರು. ಔತಣಕೂಟಕ್ಕೆ ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ […]

ಸೂಟರ್ ಪೇಟೆ : ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

Thursday, March 11th, 2021
Suterpete

ಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-6ರಿಂದ 9ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು . ನೇಮೋತ್ಸವದ ಮೊದಲು ಮಾರ್ಚ್ -5ರಂದು ಧರ್ಮದರ್ಶಿ ಶ್ರೀ ಭಾಸ್ಕರ್ […]

ಸರ್ಕಾರಿ ಜಾಗದಲ್ಲಿ ಕ್ರೈಸ್ತರು-ಹಿಂದೂಗಳ ನಡುವೆ ಆರಾಧನೆಗೆ ಕಿತ್ತಾಟ

Saturday, September 29th, 2018
Koragajja

ಮಂಗಳೂರು : ಸರ್ಕಾರಿ ಜಾಗದಲ್ಲಿ ಕ್ರೈಸ್ತರು ಮತ್ತೆ ಹಿಂದೂಗಳ ನಡುವೆ ಆರಾಧನೆ ಮಾಡುವ ವಿಚಾರದಲ್ಲಿ ಕಿತ್ತಾಟ ಆರಂಭ ಗೊಂಡಿದ್ದು ಮೇರಿಯ ಮಾತೆಯ ಆರಾಧನೆಯ ಸ್ಥಳದಲ್ಲಿ ಶುಕ್ರವಾರ ಮಧ್ಯರಾತ್ರಿ ನಂತರ ಕೊರಗಜ್ಜ ದೈವದ ಆರಾಧನೆ ಆರಂಭ ಗೊಂಡಿದೆ. ಬಂಟ್ವಾಳ ತಾಲೂಕು ಕುಂಟ್ರಕಳದ ಸರ್ಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 45 ವರ್ಷಗಳಿಂದ ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು  ಕೆಲವು  ಆರಾಧನೆ ಮಾಡುತ್ತಿದ್ದರು. ಸೆ.28 ಮಧ್ಯರಾತ್ರಿ  ಹಿಂದೂಗಳ ತಂಡ […]

ಮಹಾಮಳೆಯಲ್ಲಿ ಕೋಮುಸೌಹಾರ್ದತೆ: ಕೊರಗಜ್ಜನ ಗುಡಿ ಸ್ವಚ್ಛಗೊಳಿಸಿದ ಮುಸ್ಲಿಂ ಯುವಕರು..!

Wednesday, May 30th, 2018
muslim-people

ಮಂಗಳೂರು: ಕೋಮುಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಯಲ್ಲಿ ಕೋಮುಸೌಹಾರ್ದತೆಯನ್ನು ಸಾರುವ ಘಟನೆಯೊಂದು ನಡೆದಿದೆ. ಮಂಗಳೂರಿನ ಪಾಂಡೇಶ್ವರದ ಶಿವನಗರದಲ್ಲಿ ಇರುವ ಕೊರಗಜ್ಜನ ಗುಡಿಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿತ್ತು. ಮನೆಯೊಂದರ ಪಕ್ಕದಲ್ಲಿ ಕೆಳಮಟ್ಟದಲ್ಲಿದ್ದ ಈ ಗುಡಿಯ ಆವರಣದೊಳಗೆ ನೀರು ತುಂಬಿಕೊಂಡಿತ್ತು. ಗುಡಿಯ ಸುತ್ತಲೂ ನೀರು ತುಂಬಿಕೊಂಡು ಗುಡಿಯ ಆವರಣ ಪೂರ್ತಿ ಜಲಾವೃತವಾಗಿತ್ತು. ಅಷ್ಟು ಮಾತ್ರವಲ್ಲ ಇಲ್ಲಿಯ ಮನೆಗಳಿಗೆ ಕೂಡ ನೀರು ತುಂಬಿ ಜನರು ಸಂಕಷ್ಟಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಅದರ ಪಕ್ಕದಲ್ಲಿದ್ದ ಪ್ಲಾಟ್‌ವೊಂದರ ಮುಸ್ಲಿಂ ಯುವಕರಾದ ರಮೀಝ್, ಬಾವುಂಙಕ, […]

ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜ ದೈವಕ್ಕೆ ಅವಮಾನಿಸಿದ ವ್ಯಕ್ತಿ ಸನ್ನಿಧಾನದಲ್ಲಿ ಕ್ಷಮೆ ಯಾಚನೆ

Tuesday, November 7th, 2017
koragajja

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜ ದೈವಗೆ ಅವಮಾನಿಸಿದ ವ್ಯಕ್ತಿಯು, ತುಳುನಾಡಿನ ಆರಾಧ್ಯ ಕೊರಗಜ್ಜ ದೈವ ಸನ್ನಿಧಾನಕ್ಕೆ ತೆರಳಿ, ಹರಕೆ ಒಪ್ಪಿಸಿ, ಕ್ಷಮೆ ಯಾಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶಿರಸಿ ಮೂಲದ ಮನೋಜ್ ಪಂಡಿತ್ ಎಂಬಾತ ಕೆಲ ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ತುಳುನಾಡಿನ ಕಾರಣಿಕ ದೈವ ಎಂದೇ ನಂಬಲಾಗಿರುವ ಸ್ವಾಮಿ ಕೊರಗಜ್ಜ ಗೆ ಕೀಳು ಭಾಷೆ ಬಳಸಿ, ಬರಹ ಪೋಸ್ಟ್ ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಮನೋಜ್ ಪಂಡಿತ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. […]