ಮೇರಿ ಮಾತೆಯ ಜನ್ಮದಿನದ ಪ್ರತೀಕವಾಗಿ ತೆನೆ ಹಬ್ಬ ಆಚರಿಸಿದ ಕ್ರೈಸ್ತ ಭಾಂಧವರು

Friday, September 8th, 2017
Monti Fest

ಮಂಗಳೂರು: ಮೇರಿ ಮಾತೆಯ ಜನ್ಮದಿನದ ಪ್ರತೀಕವಾಗಿ ಮೊಂತಿ ಫೆಸ್ಟ್ (ತೆನೆ ಹಬ್ಬ) ವನ್ನು  ಕರಾವಳಿ ಭಾಗದ ಕ್ರೈಸ್ತ ಭಾಂಧವರು ಅತ್ಯಂತ ಶ್ರದ್ಧೆಯಿಂದ ಆಚರಿಸಿದರು. ಪ್ರತಿ ವರ್ಷ ತೆನೆ ಹಬ್ಬ ಸೆಪ್ಟಂಬರ್ ತಿಂಗಳಲ್ಲಿ 8 ಬರುತ್ತದೆ. ಈ ಸಮಯದಲ್ಲಿ ಮಳೆಗಾಲದ ಕೊನೆಯಾಗುತ್ತಿದ್ದು, ಪ್ರಕೃತಿಯ ಹಚ್ಚ ಹಸಿರಿನಿಂದ ಕಂಗೊಳಿಸಿರುತ್ತದೆ. ಭತ್ತದ ಹೊಸ ತೆನೆಯನ್ನು ಕೊಯ್ದು ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಅಲ್ಲಿ ಆಶೀರ್ವದಿಸಿ ನಂತರ ಮನೆಗೆ ತಂದು ಆ ಅಕ್ಕಿಯನ್ನು ಸುಲಿದು ಪಾಯಸ ಮಾಡಿ ಕುಟುಂಬದ ಎಲ್ಲಾ ಸದಸ್ಯರು ಸವಿಯುವುದೇ ಈ ಹಬ್ಬದ […]