ಮಂಗಳೂರು : ಕಲ್ಲಿನ ಕ್ವಾರಿಗೆ ದೂಡಿ ಪತ್ನಿಯನ್ನು ಕೊಲೆ ಮಾಡಿದ ಟಿಪ್ಪರ್ ಚಾಲಕ

Friday, July 3rd, 2020
quary

ಮಂಗಳೂರು :  ತನ್ನ ಪತ್ನಿಯನ್ನು ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಕಾವೂರಿನ ಟಿಪ್ಪರ್ ಚಾಲಕ ಗಣೇಶ್(40) ತನ್ನ ಪತ್ನಿ ಶಾಂತಾ(30) ಅವರನ್ನು ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಕಾವೂರು ಪೊಲೀಸರು ಗುರುವಾರ ರಾತ್ರಿ ಕರಂಬಾರಿಗೆ ತೆರಳಿ ಶಾಂತಾ ಅವರ ಶವವನ್ನು ಪತ್ತೆ ಮಾಡಿದ್ದಾರೆ. ಗಣೇಶ್ ಹಾಸನ ಮೂಲದವನಾಗಿದ್ದು, ಕಾವೂರು ಪರಿಸರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಪತ್ನಿ ಶಾಂತಾ ಕಾಸರಗೋಡು ಮೂಲದವರು. ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. […]