ಟ್ರಾಫಿಕ್ ನಿಯಮ ಉಲ್ಲಂಘನೆ ಒಟ್ಟು 178 ಪ್ರಕರಣ ದಾಖಲು

Thursday, March 14th, 2019
traffic police

ಮಂಗಳೂರು : ಕರ್ಕಶ ಹಾರ್ನ್ ಸಹಿತ ಚಾಲನೆ ಮಾಡುತ್ತಿದ್ದ 40 ಪ್ರಕರಣ ಹಾಗೂ ಜೀಬ್ರಾ ಕ್ರಾಸ್ ಉಲ್ಲಂಘನೆ ಮಾಡಿದ 138 ಪ್ರಕರಣಗಳನ್ನು  ಬುಧವಾರ  ನಗರ ಟ್ರಾಫಿಕ್ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ. ನಗರದೆಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿದ್ದ ಜೀಬ್ರಾ ಕ್ರಾಸ್ ಉಲ್ಲಂಘನೆ ಹಾಗೂ ವಾಹನಗಳ ಕರ್ಕಶ ಹಾರ್ನ್ಗಳ ಬಗ್ಗೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಸುಮಾರು 40 ವಾಹನಗಳ ಹಾರ್ನ್ ಕಳಚಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಪತ್ತೆಯಾದ ಎಲ್ಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದೆ.