ದಿನಸಿ ಅಂಗಡಿಯ ಪರವಾನಿಗೆ ಹೊಂದಿರುವವರು ಮಾರ್ಚ್ 31 ರಂದು ಕಡ್ಡಾಯವಾಗಿ ತೆರೆಯಬೇಕು : ಸಚಿವ ಕೋಟ

Monday, March 30th, 2020
Kota Srinivas

ಬಂಟ್ವಾಳ: ಮಾರ್ಚ್ 31ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3ರ ವರೆಗೆ ತೆರೆಯಲಿದ್ದು, ದಿನಸಿ ಅಂಗಡಿಯ ಪರವಾನಿಗೆ ಹೊಂದಿರುವವರು ಕಡ್ಡಾಯವಾಗಿ ಅಂಗಡಿಯನ್ನು ತೆರೆಯಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಬಂಟ್ವಾಳ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು, ವಿಎ, ಗ್ರಾಮ ಸಹಾಯಕರು, ಪಿಡಿಒ, ಟಾಸ್ಕ್ ಫೋರ್ಸ್ ಸಮಿತಿಯವರು ಅದನ್ನು ನೋಡಿಕೊಳ್ಳಬೇಕಿದೆ. ಜತೆಗೆ ತಮ್ಮ ಅಂಗಡಿಗಳನ್ನು ವಸ್ತುಗಳನ್ನು ದಾಸ್ತಾನು ಇರಿಸಲು ಸೂಚನೆ ನೀಡಲಾಗಿದೆ. ದಿನಗೂಲಿ […]

ಉಡುಪಿ : ಮಾರ್ಚ್ 29ರ ಬೆಳಿಗ್ಗೆ 7 ರಿಂದ11 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿ ಕಾರ್ಯಾಚಚರಣೆ

Saturday, March 28th, 2020
Jagadeesha

ಉಡುಪಿ : ಮಾರ್ಚ್ 29ರ ರವಿವಾರದಿಂದ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮಾತ್ರವೇ ದಿನಬಳಕೆಯ ದಿನಸಿ ಸಾಮಗ್ರಿಗಳ ಅಂಗಡಿಗಳು ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ ನಿಗದಿಪಡಿಸಿರುವ ಈ ಅವಧಿಯಲ್ಲಿ ಮಾತ್ರವೇ ಗ್ರಾಹಕರು ತಮಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು, ತರಕಾರಿ ಹಣ್ಣು, ಹಾಲು, ಮಾಂಸ, ಮೀನು ಮುಂತಾದ ಅವಶ್ಯಕ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಮತ್ತು ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.  

ಕಡಬ : ದಿನಸಿ ಅಂಗಡಿಗಳಿಗೆ ನುಗ್ಗಿದ ಕಳ್ಳರು

Wednesday, December 4th, 2019
Kadaba

ಕಡಬ : ಕಡಬ ಸಮೀಪದ ಪೇರಡ್ಕದಲ್ಲಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿದ್ದಾರೆ. ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಉಮ್ಮರ್ ಪೊಸವಳಿಕೆ ಹಾಗೂ ಮಹಮ್ಮದ್ ಪೆಲತ್ರಾಣೆ ಎಂಬವರಿಗೆ ಸೇರಿದ ಅಂಗಡಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗಿನ ನಡುವೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಅಕ್ಕಿ, ಎಣ್ಣೆ ಸೇರಿದಂತೆ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.