ಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲ : ಕೇಶವ ಮೂರ್ತಿ

Sunday, June 27th, 2021
Keshava-Murthy

ಮಂಗಳೂರು: ಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡುವುದರಿಂದಲೇ, ರೇಡಿಯೋಗೆ ದೇಶದ ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗಿದೆ, ಎಂದು ಹಾಸನ ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಕೇಶವ ಮೂರ್ತಿ ಹೇಳಿದ್ದಾರೆ. ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆನ್‌ಲೈನ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1980 ರ ದಶಕದ ವರೆಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಿದ್ದ ಆಕಾಶವಾಣಿ, ಹೊಸತನಕ್ಕೂ ಒಗ್ಗಿಕೊಂಡಿದೆ. ಯೂ […]

ಪತ್ರಕರ್ತನಾದವನಿಗೆ ಸಂಪಾದನೆ ಮಾಡಲು ಸಾಕಷ್ಟು ದಾರಿಗಳಿವೆ : ಪ್ರಕಾಶ್ ಡಿ.ರಾಂಪೂರ್

Friday, March 19th, 2021
Alvas Journalism

ಮೂಡುಬಿದ್ರೆ :  `ಒಬ್ಬ ಪತ್ರಕರ್ತನಾದವನಿಗೆ ಸಂಪಾದನೆ ಮಾಡಲು ಸಾಕಷ್ಟು ದಾರಿಗಳಿವೆ. ಆದರೆ ನೀತಿಯುತವಾದ ಮಾರ್ಗವನ್ನು ಆಯ್ಕೆ ಮಾಡುವುದು ಪತ್ರಕರ್ತನ ಜವಾಬ್ದಾರಿ. ಒಬ್ಬ ಪತ್ರಕರ್ತನಾದವನ ವ್ಯಕ್ತಿತ್ವ, ವಿಶ್ವಾಸರ್ಹತೆ ಅವನು ಆಯ್ಕೆ ಮಾಡಿಕೊಳ್ಳುವ ದಾರಿಯ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಬೆಂಗಳೂರು ಪಬ್ಲಿಕ್ ಟಿವಿ ವರದಿಗಾರ ಹಾಗೂ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಕಾಶ್ ಡಿ.ರಾಂಪೂರ್ ಹೇಳಿದರು. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ “ಅಲ್ಯುಮಿನಿ ಲೆಕ್ಚರ್” ಕರ್ಯಕ್ರಮದಲ್ಲಿ ಅವರು […]

ಪತ್ರಿಕೋದ್ಯಮದ ಭವಿಷ್ಯ ಮಸುಕಾಗಿಲ್ಲ : ಪತ್ರಕರ್ತ ಸುರೇಶ್ ಬೆಳಗಜೆ

Wednesday, July 1st, 2020
press day

ಮಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಪತ್ರಿಕೋದ್ಯಮದ ಭವಿಷ್ಯ ಮಸುಕಾಗಿಲ್ಲ. ಬಹುಮುಖ ಕೌಶಲಗಳ ಮೂಲಕ ಪ್ರತಿಭೆ ವಿಸ್ತಾರ ಮಾಡಿಕೊಂಡಾಗ ಅವಕಾಶಗಳಿಗೆ ಕೊರತೆ ಇಲ್ಲ ಎಂದು ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಸಹಕಾರದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು `ಪತ್ರಕರ್ತ, ಪತ್ರಿಕೋದ್ಯಮ ಮತ್ತು ಪ್ರಸ್ತುತತೆ ‘ವಿಷಯದಲ್ಲಿ […]

ಪತ್ರಿಕೋದ್ಯಮದ ಭವಿಷ್ಯ ಮಸುಕಾಗಿಲ್ಲ : ಪತ್ರಕರ್ತ ಸುರೇಶ್ ಬೆಳಗಜೆ

Wednesday, July 1st, 2020
press day

ಮಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಪತ್ರಿಕೋದ್ಯಮದ ಭವಿಷ್ಯ ಮಸುಕಾಗಿಲ್ಲ. ಬಹುಮುಖ ಕೌಶಲಗಳ ಮೂಲಕ ಪ್ರತಿಭೆ ವಿಸ್ತಾರ ಮಾಡಿಕೊಂಡಾಗ ಅವಕಾಶಗಳಿಗೆ ಕೊರತೆ ಇಲ್ಲ ಎಂದು ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಸಹಕಾರದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು `ಪತ್ರಕರ್ತ, ಪತ್ರಿಕೋದ್ಯಮ ಮತ್ತು ಪ್ರಸ್ತುತತೆ ‘ವಿಷಯದಲ್ಲಿ ಉಪನ್ಯಾಸ ನೀಡಿದರು. ಮುದ್ರಣ ಮಾಧ್ಯಮ ಮುಂದಿನ ದಿನಗಳಲ್ಲಿ ಸೀಮಿತ ಚೌಕಟ್ಟಿನಲ್ಲಿ ಮುಂದುವರಿಯಲಿದೆ. ಸಂಪೂರ್ಣ ಸ್ಥಗಿತಗೊಳ್ಳುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದವರು ಹೇಳಿದರು. ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸವಾಲುಗಳ ನಡುವೆ ಮಾಹಿತಿಯನ್ನು ನೀಡುವ ಪತ್ರಕರ್ತರ ಸೇವೆ ಮಹತ್ತರ. ಇದು ಹೋಲಿಕೆ ಮಾಡಲಾಗದ ಬಹು ದೊಡ್ಡ ಕಾರ್ಯ ಎಂದರು. ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಕೃಷ್ಣಮೂರ್ತಿ ಅವರು ಪತ್ರಕರ್ತ ಮುಹಮ್ಮದ್ ಅನ್ಸಾರ್ ಇನೋಳಿ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿದರು. ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಸ್ಮಿತಾ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾವಾರ್ತಾಧಿಕಾರಿ ಖಾದರ್ ಷಾ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯ ಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

ಒತ್ತಡಗಳ ಮಧ್ಯೆ ಪತ್ರಿಕೋದ್ಯಮ ವೌಲ್ಯ ಕಾಪಾಡುವುದೇ ಸವಾಲು : ಮೋಹನ್ ಆಳ್ವ

Monday, November 18th, 2019
mohan-alva

ಮಂಗಳೂರು : ಆಧುನಿಕ ಜೀವನದಲ್ಲಿ ವೃತ್ತಿ ಬದುಕಿನ ಒತ್ತಡಗಳ ಮಧ್ತೆ ಪತ್ರಿಕಾರಂಗದ ವೌಲ್ಯಗಳನ್ನು ಕಾಪಾಡುವುದೇ ಮಾಧ್ಯಮ, ಪ್ರತಕರ್ತನ ನಿಜವಾದ ಸವಾಲು ಎಂದು ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ದ.ಕ. ಜಿಲ್ಲಾ ಕಾರ್ಯನಿತರ ಪತ್ರಕತ್ರರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನೂರು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಬೆಳವಣಿಗೆ ವಿಸ್ತಾರವಾಗಿದೆ. ಪ್ರಸಕ್ತ ಕಾಲದಲ್ಲಿ ಹೂಡಿಕೆ ಸ್ಪರ್ಧೆಯ ನಡುವೆ ಮಾಧ್ಯಮಗಳ […]

ಆಳ್ವಾಸ್ ನಲ್ಲಿ ಪತ್ರಿಕೋದ್ಯಮ ಉಪನ್ಯಾಸ ಕಾರ್ಯಗಾರ

Thursday, July 30th, 2015
ALVAS-VISION

ಮೂಡಬಿದಿರೆ : ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಆಯ್ಕೆಗಳಿಗೆ ಅವಕಾಶವಿದೆ. ಮುದ್ರಣ, ಶ್ರಾವ್ಯ ಮತ್ತು ದೃಶ್ಯ ಮಾಧ್ಯಮಗಳು ಇದಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ ಎಂದು ವಿ4 ಟಿ.ವಿ ವಾಹಿನಿಯ ನಿರೂಪಕಿ ಮಧು ಮೈಲಂಕೋಡಿ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ “ಆಳ್ವಾಸ್ ವಿಷನ್” ಎಂಬ ಪ್ರಾಯೋಗಿಕ ಫೋಟೋ ಜರ್ನಲನ್ನು ಬಿಡುಗಡೆಗೊಳಿಸಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳಿಗೆ ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು. ಪತ್ರಿಕೋದ್ಯಮವನ್ನು ಕೇವಲ ಪಠ್ಯಕ್ಕೆ ಮಾತ್ರ […]

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡ ಎಸ್ ಡಿಎಂ ಕಾಲೇಜು

Wednesday, April 10th, 2013
SDM College Ujire

ಮಂಗಳೂರು : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಂಗಣದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯ ವಿಭಾಗವು ಎಪ್ರಿಲ್ 5, 6 ರಂದು ಏರ್ಪಡಿಸಿದ್ದ ಒಟ್ಟು 10 ಸ್ಪರ್ಧೆಗಳಲ್ಲಿ 7 ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಎಸ್ ಡಿಎಂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. […]